ಕರ್ನಾಟಕ

karnataka

ETV Bharat / state

ಕೋಣ ಅಕ್ರಮ ಸಾಗಾಟ; ವಾಹನ ಬಿಟ್ಟು ಚಾಲಕ ಪರಾರಿ - bantwala

ಟೆಂಪೋ ಒಂದರಲ್ಲಿ ಅಕ್ರಮವಾಗಿ ಕೋಣ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ನಗರ ಪೊಲೀಸರು ಸೋಮವಾರ ಮುಂಜಾನೆ ಪತ್ತೆ ಹಚ್ಚಿದ್ದಾರೆ.

bantwal
ಬಂಟ್ವಾಳ

By

Published : Jul 27, 2020, 10:59 PM IST

ಬಂಟ್ವಾಳ: ಟೆಂಪೋವೊಂದರಲ್ಲಿ ಅಕ್ರಮವಾಗಿ ಕೋಣ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ನಗರ ಪೊಲೀಸರು ಸೋಮವಾರ ಮುಂಜಾನೆ ಬಿ.ಸಿ. ರೋಡ್​​ನ ಕೆಎಸ್​ಆರ್​​ಟಿಸಿ ಬಸ್ ನಿಲ್ದಾಣದ ಬಳಿ ಪತ್ತೆ ಹಚ್ಚಿದ್ದಾರೆ.

ಈ ಸಂದರ್ಭ ಟೆಂಪೋ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ನಗರ ಪೊಲೀಸರು ಕೆಎಸ್​​ಆರ್​​ಟಿಸಿ ಬಸ್ ತಂಗುದಾಣದ ಬಳಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ಬೆಂಗಳೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಟೆಂಪೋವನ್ನು ಅನುಮಾನದಿಂದ ತಡೆದು ನಿಲ್ಲಿಸಿದಾಗ ಅದರ ಚಾಲಕ ಟೆಂಪೋವನ್ನು ಮುಂದಕ್ಕೆ ಚಲಾಯಿಸಿ, ಅಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಟೆಂಪೋ ಹಿಂಬದಿ ತಪಾಸಣೆ ಗೈದಾಗ ಒಂದು ಕೋಣವನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಇದನ್ನು ಎಲ್ಲಿಂದಲೋ ಕಳವುಗೈದು ಗೋ ವಧಾ ಕೇಂದ್ರಕ್ಕೆ ಅಕ್ರಮವಾಗಿ ಸಾಗಿಸಲಾಗಿತ್ತಿತ್ತು ಎಂದು ಶಂಕಿಸಲಾಗಿದೆ.

ಇನ್ನು ಬಂಟ್ವಾಳ ನಗರ ಪೊಲೀಸರು ಟೆಂಪೋ ಹಾಗೂ ಕೋಣವನ್ನು ವಶಪಡಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ವಶಪಡಿಸಲಾದ ಸೊತ್ರುಗಳ ಮೌಲ್ಯ 4.05 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details