ಮಂಗಳೂರು: ಹಾಲಿನ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವುದನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿ ಆರೋಪಿಯೋರ್ವನನ್ನು ಪೊಲೀಸರಿಗೊಪ್ಪಿಸಿದ್ದಾರೆ.
ಅಕ್ರಮವಾಗಿ ಗೋಮಾಂಸ ಸಾಗಾಟ: ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು - ಅಕ್ರಮ ಗೋಮಾಂಸ ಸಾಗಾಟ
ಹಾಲಿನ ವಾಹನದಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಆರೋಪಿಯೋರ್ವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮಂಗಳೂರಿನ ಹಂಪನಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಹಾಲಿನ ವಾಹನದಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು, ಮಂಗಳೂರಿನ ಪಂಪ್ ವೆಲ್ನಿಂದ ವಾಹನವನ್ನು ಬೆನ್ನತ್ತಿದ್ದು ಹಂಪನಕಟ್ಟೆಯಲ್ಲಿ ತಡೆದಿದ್ದಾರೆ. ವಾಹನವನ್ನು ಪರಿಶೀಲಿಸಿದ ವೇಳೆ ಹಾಲಿನ ಪ್ಯಾಕೆಟ್ ಮಧ್ಯೆ ಗೋಮಾಂಸ ಇರಿಸಲಾಗಿತ್ತು. ಅಕ್ರಮವಾಗಿ ಜಾನುವಾರು ವಧೆ ಮಾಡಿ ಅದರ ಮಾಂಸವನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದರು ಎಂದು ತಿಳಿದು ಬಂದಿದೆ.
ವಾಹನವನ್ನು ಹಂಪನಟ್ಟೆಯಲ್ಲಿ ತಡೆದ ಬಜರಂಗದಳ ಕಾರ್ಯಕರ್ತರು, ಬಂದರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಾಹನದಲ್ಲಿ ಮೂವರಿದ್ದು, ಇದರಲ್ಲಿ ಇಬ್ಬರು ದಾಳಿ ವೇಳೆ ಪರಾರಿಯಾಗಿದ್ದಾರೆ. ಓರ್ವನನ್ನು ಹಿಡಿದ ಬಜರಂಗದಳ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.