ಕರ್ನಾಟಕ

karnataka

ETV Bharat / state

ವಿಟ್ಲದಲ್ಲಿ ಅಕ್ರಮ ಜಾನುವಾರು ಸಾಗಾಟ: ಓರ್ವನ ಬಂಧನ - ಓರ್ವ ಬಂಧನ

ಮಂಗಳೂರಿನ ಗ್ರಾಮವೊಂದರಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿ, ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಓರ್ವನ ಬಂಧನ

By

Published : Oct 25, 2019, 6:14 AM IST

ಮಂಗಳೂರು:ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಮುಂಡತಜೆಯಲ್ಲಿ, ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ತಡೆದು ಓರ್ವನನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕೊಳ್ನಾಡು ನಿವಾಸಿ ಉಸ್ಮಾನ್ ಶಾಫಿ ಬಂಧಿತ ಆರೋಪಿ. ಈತನ ಜೊತೆಗಿದ್ದ ಮತ್ತೋರ್ವ ಆರೋಪಿ ಸಿದ್ದಿಕ್ ಪರಾರಿಯಾಗಿದ್ದಾನೆ.

ಇವರು ವಾಹನದಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಒಂದು ಹೋರಿ ಮತ್ತು ಒಂದು ಹಸು ಸಾಗಾಟ ಮಾಡುತ್ತಿದ್ದರು. ಹಸು, ಹೋರಿಯನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details