ಕರ್ನಾಟಕ

karnataka

ETV Bharat / state

ಮುಂದಿನ ಎರಡು ವರ್ಷಗಳಲ್ಲಿ ವಿದೇಶಗಳಲ್ಲೂ ಐಐಟಿ ಆರಂಭ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ - etv bharat kannada

ಸೌರಶಕ್ತಿ ಬಳಕೆ ಯೋಜನೆ, ಜಲಜನಕ ಇಂಧನ ಘಟಕ ಯೋಜನೆಯು ದೇಶದ ಮುಂದಿನ ಸುಸ್ಥಿರ ಇಂಧನ ಯೋಜನೆಗೆ ಮಾದರಿಯಾಗಲಿದೆ ಎಂದು ಕೇಂದ್ರ ಶಿಕ್ಷಣ, ಉದ್ಯಮ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

iit-to-start-abroad-in-next-two-years-union-minister-dharmendra-pradhan
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

By

Published : Oct 15, 2022, 5:43 PM IST

ಮಂಗಳೂರು:ವಿದೇಶಗಳಲ್ಲಿಯೂ ಐಐಟಿಗಳನ್ನು ಸ್ಥಾಪಿಸಲು ಆಸಕ್ತಿ ಹೊಂದಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕೆಲವು ದೇಶಗಳಲ್ಲಿ ಐಐಟಿ ಆರಂಭಿಸಲಾಗುವುದು ಎಂದು ಕೇಂದ್ರ ಶಿಕ್ಷಣ, ಉದ್ಯಮ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ಸುರತ್ಕಲ್‍ನ ಎನ್​ಐಟಿಕೆಯಲ್ಲಿ ಕೇಂದ್ರೀಯ ಸಂಶೋಧನಾ ಸೌಲಭ್ಯಗಳ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಭಾರತದ ಐಐಟಿಯು ದೇಶ ವಿದೇಶದಲ್ಲಿ ತನ್ನ ಗುಣಮಟ್ಟದ ಶಿಕ್ಷಣದಿಂದ ಖ್ಯಾತಿ ಪಡೆದಿದೆ. ಜಾಗತಿಕ ಸವಾಲು ಎದುರಿಸಲು ಎನ್​ಐಟಿಕೆಯಂತಹ ಸಂಸ್ಥೆಗಳು ಸಾಮರ್ಥ್ಯ ಪಡೆಯಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದರು.

ಎನ್ಐಟಿಕೆಯಲ್ಲಿ ದಿನವೊಂದಕ್ಕೆ ಸುಮಾರು 500 ಕೆ.ಜಿ. ಆಹಾರ ಇತರ ಜೈವಿಕ ತ್ಯಾಜ್ಯದ ಮೂಲಕ ನೈಸರ್ಗಿಕ ಅನಿಲ ಉತ್ಪಾದಿಸಲಾಗುತ್ತದೆ. ಸೌರಶಕ್ತಿ ಬಳಕೆ ಯೋಜನೆ, ಜಲಜನಕ ಇಂಧನ ಘಟಕ ಯೋಜನೆಯು ದೇಶದ ಮುಂದಿನ ಸುಸ್ಥಿರ ಇಂಧನ ಯೋಜನೆಗೆ ಮಾದರಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಭರತ್ ಶೆಟ್ಟಿ, ವೈ.ನಾರಾಯಣ ಸ್ವಾಮಿ, ಎನ್ಐಟಿಕೆ ನಿರ್ದೇಶಕ (ಪ್ರಭಾರ) ಪ್ರೊ.ಪ್ರಸಾದ್ ಕೃಷ್ಣ, ಸಿಆರ್​​ಎಫ್ ಅಧ್ಯಕ್ಷ ಪ್ರೊ.ಎಂ.ಎನ್. ಸತ್ಯನಾರಾಯಣ, ಕುಲಸಚಿವ ರವೀಂದ್ರನಾಥ ಇತರರು ಇದ್ದರು.

ಇದನ್ನೂ ಓದಿ:ಸಂಪುಟ ವಿಸ್ತರಣೆ ವಿಚಾರ : ಶೀಘ್ರದಲ್ಲೇ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಎಂದ ಸಿಎಂ

ABOUT THE AUTHOR

...view details