ಕರ್ನಾಟಕ

karnataka

ETV Bharat / state

'ಮೋದಿ ಪ್ರಧಾನಿ ಆಗದಿದ್ದರೆ ದೇಶ ವಿಭಜನೆ ಆಗಲಿದೆ' - undefined

ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ ದೇಶವು ವಿಭಜನೆ ಆಗಲಿದೆ. ದೇಶದಲ್ಲಿ ಬಿನ್ ಲಾಡೆನ್, ಮಸೂದ್ ಅಜರ್, ಹಫೀಜ್ ಸಯೀದ್ ಸಂಸ್ಕೃತಿ ಬರಲಿದೆ ಎಂದು ದ.ಕ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ದ.ಕ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ

By

Published : Apr 9, 2019, 10:11 PM IST

ಮಂಗಳೂರು:ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ ದೇಶವು ವಿಭಜನೆ ಆಗಲಿದೆ ಎಂದು ದ.ಕ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ ದೇಶದಲ್ಲಿ ಬಿನ್ ಲಾಡೆನ್, ಮಸೂದ್ ಅಜರ್, ಹಫೀಜ್ ಸಯೀದ್ ಸಂಸ್ಕೃತಿ ಬರಲಿದೆ ಎಂದರು.

ಹರಿಕೃಷ್ಣ ಬಂಟ್ವಾಳ, ದ.ಕ ಜಿಲ್ಲಾ ಬಿಜೆಪಿ ವಕ್ತಾರ

ದೇಶದಲ್ಲಿ ಎರಡು ಪ್ರಧಾನಿ ಬೇಕು ಎಂಬ ಕೂಗು ಕಾಶ್ಮೀರದಲ್ಲಿ ಕೇಳಿ ಬಂತು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ್ದು ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಜೆಪಿ‌ ಮಾತ್ರ. ಬೇರೆ ಯಾವ ಪಕ್ಷದವರೂ ವಿರೋಧ ವ್ಯಕ್ತಪಡಿಸಿಲ್ಲ. ಇದೆಲ್ಲವನ್ನೂ ನೋಡುವಾಗ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗದಿದ್ದರೆ ದೇಶ ವಿಭಜನೆ ಆಗಲಿದೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details