ಕರ್ನಾಟಕ

karnataka

ETV Bharat / state

ಪ್ರತಿ 50 ಕಿ.ಮೀ. ವ್ಯಾಪ್ತಿಯಲ್ಲಿ ಇಸಿಜಿ ಲಭ್ಯವಾದಲ್ಲಿ ಹೃದಯಾಘಾತದ ಅಪಾಯ ತಪ್ಪಿಸಲು ಸಾಧ್ಯ: ಪದ್ಮನಾಭ ಕಾಮತ್

ಹೃದಯಾಘಾತವನ್ನು ಖಾತರಿ ಮಾಡಿಕೊಳ್ಳಲು ಬಹಳ ಸರಳ ವಿಧಾನ ಇಸಿಜಿ ಆಗಿರುವುದರಿಂದ ಈ ಸೌಲಭ್ಯ ಬೇಗನೇ ದೊರಕಿದ್ದಲ್ಲಿ ರೋಗಿಯ ಜೀವ ಉಳಿಸಲು ಸಾಧ್ಯ. ಹೃದಯಾಘಾತವಾದ ನಂತರದ ಒಂದು ಗಂಟೆಯ ಅವಧಿ ಅತೀ ಅಮೂಲ್ಯವಾದದ್ದು.

Padmanabha Kamath
ಪದ್ಮನಾಭ ಕಾಮತ್

By

Published : Nov 12, 2021, 5:58 AM IST

Updated : Nov 12, 2021, 6:48 AM IST

ಮಂಗಳೂರು: ಕುಗ್ರಾಮಗಳು ಸೇರಿದಂತೆ ಗ್ರಾ.ಪಂ.ಗಳ ಪ್ರತಿ 50 ಕಿ.ಮೀ. ವ್ಯಾಪ್ತಿಯಲ್ಲಿ ಇಸಿಜಿ(ECG) ಲಭ್ಯವಾದಲ್ಲಿ ಹೃದಯಾಘಾತದ ಪ್ರಾಣಾಪಾಯ ತಪ್ಪಿಸಲು ಸಾಧ್ಯ ಎಂದು ಮಂಗಳೂರು ಕೆಎಂಸಿ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಹೃದ್ರೋಗ ತಪಾಸಣೆ, ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹೃದಯ ತೊಂದರೆ ಆದಾಗ ತಪಾಸಣೆ ಅಗತ್ಯ. ನಗರ ಪ್ರದೇಶಗಳಲ್ಲಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರುವುದರಿಂದ ತಕ್ಷಣ ತಪಾಸಣೆ ಚಿಕಿತ್ಸೆ ದೊರೆಯುತ್ತದೆ. ಆದರೆ, ಕುಗ್ರಾಮಗಳಲ್ಲಿ ಹೃದ್ರೋಗ ಸಂಬಂಧಿತ ರೋಗಿಗೆ ಸೂಕ್ತ ಸಮಯದಲ್ಲಿ ತಪಾಸಣೆ ದೊರಕದೇ ಪ್ರಾಣಾಪಾಯ ಸಂಭವಿಸುವುದು ಹೆಚ್ಚಾಗಿರುತ್ತದೆ.

ಆದ್ದರಿಂದ ಹೃದಯಾಘಾತವನ್ನು ಖಾತರಿ ಮಾಡಿಕೊಳ್ಳಲು ಬಹಳ ಸರಳ ವಿಧಾನ ಇಸಿಜಿಯಾಗಿರುವುದರಿಂದ ಈ ಸೌಲಭ್ಯ ಬೇಗನೇ ದೊರಕಿದಲ್ಲಿ ರೋಗಿಯ ಜೀವ ಉಳಿಸಲು ಸಾಧ್ಯ. ಹೃದಯಾಘಾತವಾದ ನಂತರದ ಒಂದು ಗಂಟೆಯ ಅವಧಿ ಅತೀ ಅಮೂಲ್ಯವಾದುದು. ಈ‌ ಅವಧಿಯಲ್ಲಿ 50ಕಿ.ಮೀ. ವ್ಯಾಪ್ತಿಯಲ್ಲಿ ಇಸಿಜಿ ವ್ಯವಸ್ಥೆ ಲಭ್ಯವಾದಲ್ಲಿ ಹೃದಯದ ತೊಂದರೆಗಳನ್ನು ಖಾತರಿ ಪಡಿಸಲು ಸಾಧ್ಯ. ಆ ಬಳಿಕ ಪ್ರಾಥಮಿಕ ಚಿಕಿತ್ಸೆ ಒದಗಿಸಬಹುದು ಎಂದು ಹೇಳಿದರು.

ಡಾ. ಪದ್ಮನಾಭ ಕಾಮತ್

ಈ ನಿಟ್ಟಿನಲ್ಲಿ ಈಗಾಗಲೇ ಗ್ರಾಪಂ ಅಂಗನಯ ಪ್ರಾಜೆಕ್ಟ್ ಹೆಸರಿನಲ್ಲಿ ನಮ್ಮ ತಂಡ ಕಾರ್ಯಪ್ರವೃತ್ತವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಾತ್ರವಲ್ಲದೇ ಉಪ ಕೇಂದ್ರಗಳಲ್ಲಿಯೂ ಇಸಿಜಿ ವ್ಯವಸ್ಥೆ ಮಾಡಲಾಗುತ್ತದೆ. ಇದು ದೂರದೃಷ್ಟಿಯುಳ್ಳ ಯೋಜನೆಯಾಗಿದ್ದು, ದೇಶಾದ್ಯಂತ ಈ ಯೋಜನೆ ವ್ಯಾಪಿಸುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ದ.ಕ.ಜಿಲ್ಲೆ ಮಾದರಿಯಾಗಬೇಕು ಎಂದು ಪದ್ಮನಾಭ ಕಾಮತ್ ಹೇಳಿದರು.

ಇದನ್ನೂ ಓದಿ:ಇದು ಹೃದಯಗಳ ವಿಷಯ. ಯುವ ಜನರೇ ತಪ್ಪದಿರಿ ಎಚ್ಚರ!

Last Updated : Nov 12, 2021, 6:48 AM IST

ABOUT THE AUTHOR

...view details