ಮಂಗಳೂರು : ಪಿಎಫ್ಐ, ಎಸ್ ಡಿಪಿಐ ಬ್ಯಾನ್ ಮಾಡಲು ಕಾಂಗ್ರೆಸ್ ಕರೆ ನೀಡಿದರೆ ವಿಶ್ವ ಹಿಂದೂ ಪರಿಷತ್ ನೂರಕ್ಕೆ ನೂರು ಪ್ರತಿಶತ ಅವರ ಅಭಿಪ್ರಾಯದೊಂದಿಗೆ ಜೊತೆಗೂಡುತ್ತೇವೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಪಿಎಫ್ಐ, ಎಸ್ ಡಿಪಿಐ ಬ್ಯಾನ್ ಗೆ ಕಾಂಗ್ರೆಸ್ ಕರೆ ನೀಡಿದರೆ ಖಂಡಿತಾ ಸಹಮತ ನೀಡುತ್ತೇವೆ.. ವಿಹಿಂಪ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರವಿರೋಧಿಗಳ ವಿರುದ್ಧ ಯಾರು ಹೋರಾಡುತ್ತಾರೋ ಅವರೊಂದಿಗೆ ನಾವು ಕೈಜೋಡಿಸುತ್ತೇವೆ. ಈ ಬಗ್ಗೆ ಉತ್ತಮ ಮುಸ್ಲಿಂ ಸಂಘಟನೆಗಳು ಕರೆ ನೀಡಿದರೂ ನಾವು ಸಹಮತ ಸೂಚಿಸುತ್ತೇವೆ ಎಂದು ಹೇಳಿದರು.
ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳು ಸಾವರ್ಕರ್ ಫೋಟೋ ಅಳವಡಿಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಮಂಗಳೂರಿನ ಗುರುಪುರದಲ್ಲಿ ಆಕ್ಷೇಪ ವ್ಯಕ್ತಪಡಿಸಿ ರಾದ್ಧಾಂತ ಸೃಷ್ಟಿಸಿರುವ ಖಂಡನೀಯ. ತಕ್ಷಣ ಬಿಜೆಪಿ ಸರಕಾರವು ಈ ಎರಡೂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ, ಈ ಸಂಘಟನೆಗಳನ್ನು ನಿಷೇಧ ಮಾಡದೇ ಇದ್ದಲ್ಲಿ ಸಮಾಜವು ಮುಂದೆ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡುತ್ತಿಲ್ಲ ಎಂಬುದನ್ನು ನಾವು ಒಪ್ಪುವುದಿಲ್ಲ. ಬಿಜೆಪಿ ರಾಷ್ಟ್ರೀಯವಾದಿ ಪಕ್ಷವಾಗಿದ್ದು, ಖಂಡಿತಾ ಆ ಮಟ್ಟಕ್ಕೆ ಬಿಜೆಪಿ ಇಳಿಯಲಿಕ್ಕಿಲ್ಲ ಎಂಬ ವಿಶ್ವಾಸವಿದೆ ಎಂದರು.
ಫಾಜಿಲ್ ಹತ್ಯೆಯನ್ನು ಸಮರ್ಥನೆ ಮಾಡುವುದಿಲ್ಲ:ಸುರತ್ಕಲ್ ಫಾಜಿಲ್ ಹತ್ಯೆಯನ್ನು ನಾವು ಸಮರ್ಥನೆ ಮಾಡುವುದಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಹಿಂದೂಗಳ ಹತ್ಯೆಯಾಗುತ್ತಿದೆ. ಇದರಿಂದಾಗಿ ಹಿಂದೂ ಯುವಕರಲ್ಲಿ ಆಕ್ರೋಶ ನಿರ್ಮಾಣವಾಗಿದೆ. ಯಾವುದೇ ಕೃತ್ಯದಲ್ಲಿ ಗುರುತಿಸಿಕೊಳ್ಳದ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದು,ಅದಕ್ಕೆ ಪ್ರತಿಯಾಗಿ ಸುರತ್ಕಲ್ ನಲ್ಲಿ ಫಾಜಿಲ್ ಕೊಲೆಯಾಗಿದೆ. ಈ ಹತ್ಯೆಯನ್ನು ನಾವು ಸಮರ್ಥಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ :ಮಹಿಳಾ ಹೆಡ್ ಕಾನ್ಸ್ಟೇಬಲ್ಗೆ ಡ್ರ್ಯಾಗರ್ ನಿಂದ ಇರಿದ ರೌಡಿಶೀಟರ್