ಹುಬ್ಬಳ್ಳಿ :ಬಿಜೆಪಿಯವರು ಮಾತಿನ ಮಲ್ಲರು. ಕೇವಲ ಪ್ರಚಾರ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಜಾಧವ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದು ನಾನು ಧರಂಸಿಂಗ್. ಆದರೆ, ನನನ್ನು ಸೋಲಿಸಲು ಮೋದಿ ಜೊತೆ ಸೇರಿ ಬಿಜೆಪಿ ನಾಯಕರು ಕುತಂತ್ರ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕೆಲಸ ಮಾಡದ ಬಿಜೆಪಿಯವರು ಬರೀ ಮಾತಿನ ಮಲ್ಲರು, ಬೈ ಎಲೆಕ್ಷನ್‌ನ ಕಾಂಗ್ರೆಸ್ ಗೆಲ್ಲುತ್ತೆ- ಮಲ್ಲಿಕಾರ್ಜುನ್ ಖರ್ಗೆ - undefined
ಬಿಜೆಪಿಯವರು ಕೇವಲ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ- ಪ್ರತಿಪಕ್ಷ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದು, ನನಗೆ ಗೆಲುವು ನಿಶ್ಚಿತ- ಪದೇಪದೆ ದಲಿತ ಸಿಎಂ ಎಂದು ಹೇಳಿ ನನಗೆ ಅಪಮಾನ ಮಾಡಬೇಡಿ- ನಾನು ಸಿಎಂ ಆಗೋ ವಿಚಾರ ಚುನಾವಣೆ ನಂತರ ನಾನು ಕೇಳಲ್ಲ, ಅವರೂ ಹೇಳಲ್ಲ.
ಪ್ರತಿಪಕ್ಷ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದೇನೆ ಯಾರ ಕುತಂತ್ರದಿಂದ ಕೂಡ ನನಗೆ ಅನ್ಯಾಯವಾಗಲ್ಲ ಖರ್ಗೆ ಸ್ಪಷ್ಟನೆ
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಂದಗೋಳ-ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಪ್ರತಿಪಕ್ಷ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಯಾರೇ ಕುತಂತ್ರ ನಡೆಸಿದರೂ ಕೂಡ ನನಗೆ ಅನ್ಯಾಯವಾಗಲ್ಲ.
ಸಿಎಂ ಹೆಚ್.ಡಿ ಕುಮಾರಸ್ವಾಮಿ ಖರ್ಗೆ ಸಿಎಂ ಆಗಬೇಕಿತ್ತು ಎಂಬ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಪದೇಪದೆ ದಲಿತ ಸಿಎಂ ಎಂದು ಹೇಳಿ ನನಗೆ ಅಪಮಾನ ಮಾಡಬೇಡಿ. ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಬರುತ್ತವೆ. ನಂತರ ನಾನು ಈ ಬಗ್ಗೆ ಕೇಳಲ್ಲ, ಅವರೂ ಈ ಬಗ್ಗೆ ಹೇಳಲ್ಲ ಎಂದರು.