ಉಡುಪಿ: ತೌಕ್ತೆ ಚಂಡಮಾರುತದಿಂದ ಮರವಂತೆಯಲ್ಲಿ ಭಾರಿ ಹಾನಿ ಸಂಭವಿಸಿದೆ. ಇಲ್ಲಿನ ಕಡಲ ತಡಿಯಲ್ಲಿ ಭಾರೀ ಕಡಲ್ಕೊರೆತ ಶುರುವಾಗಿದ್ದು, ಅಲೆಗಳ ಹೊಡೆತಕ್ಕೆ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿವೆ.
30 ಮೀಟರ್ನಷ್ಟು ಮುಂದೆ ಬಂದಿರುವ ಕಡಲ ಅಲೆಗಳು ಮನೆ, ಮರಗಳನ್ನು ಆಹುತಿ ಪಡೆಯಲಾರಂಭಿಸಿವೆ. ಕಡಲಿನ ರೌದ್ರಾವತಾರ ಕಂಡು ತೀರ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಲೆಗಳ ತೀವ್ರತೆ ಹೀಗೆಯೇ ಮುಂದುವರೆದರೆ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಉಳ್ಳಾಲದಲ್ಲಿಯೂ ಕಡಲ್ಕೊರೆತ:ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಉಳ್ಳಾಲ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ.