ಮಂಗಳೂರು: ಕೃಷಿ ಕೆಲಸಕ್ಕೆಂದು ತೆರಳುತ್ತಿದ್ದ ಮಹಿಳೆಯರನ್ನು ಶಾಸಕ ಯು.ಟಿ.ಖಾದರ್ ತನ್ನ ಕಾರಿನಲ್ಲಿ ಕರೆದೊಯ್ದ ವಿಡಿಯೋ ವೈರಲ್ ಆಗಿದೆ.
ಖಾದರ್ ಅವರು ಕಾರ್ಯ ನಿಮಿತ್ತ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದರು. ಆಗ ಇಬ್ಬರು ಹಿರಿ ವಯಸ್ಸಿನ ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ, ಚಾಲಕನಿಗೆ ಸೂಚಿಸಿ ಕಾರು ನಿಲ್ಲಿಸಿದ್ದಾರೆ. ಇಬ್ಬರನ್ನೂ ಕಾರಿನಲ್ಲಿ ಹತ್ತಿಸಿಕೊಂಡ ಖಾದರ್, ಅವರಲ್ಲಿ ಎಲ್ಲಿಗೆ ಹೋಗುವುದೆಂದು ವಿಚಾರಿಸಿದ್ದಾರೆ. ಈ ವೇಳೆ ಓರ್ವ ಮಹಿಳೆ ಸಮೀಪದ ನಾಗಬನಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾರೆ.