ಮಂಗಳೂರು: ಹೊಸಬೆಟ್ಟು ಕಡಲ ತೀರದಲ್ಲಿ ಶನಿವಾರದಂದು ಗಾಯಗೊಂಡು ದಡ ಸೇರಿದ ಬೃಹತ್ ಗಾತ್ರದ ಕಡಲಾಮೆಯೊಂದು ಪತ್ತೆಯಾಗಿದೆ.
ಹೊಸಬೆಟ್ಟು ಕಡಲ ತೀರದಲ್ಲಿ ಗಾಯಗೊಂಡಿದ್ದ ಬೃಹತ್ ಕಡಲಾಮೆ ಪತ್ತೆ! - ಗಾಯಗೊಂಡ ಬೃಹತ್ ಕಡಲಾಮೆ ಪತ್ತೆ ಮಂಗಳೂರು
ಹೊಸಬೆಟ್ಟು ಕಡಲ ತೀರದಲ್ಲಿ ಶನಿವಾರದಂದು ಗಾಯಗೊಂಡು ದಡ ಸೇರಿದ ಬೃಹತ್ ಗಾತ್ರದ ಕಡಲಾಮೆಯೊಂದು ಪತ್ತೆಯಾಗಿದೆ.
![ಹೊಸಬೆಟ್ಟು ಕಡಲ ತೀರದಲ್ಲಿ ಗಾಯಗೊಂಡಿದ್ದ ಬೃಹತ್ ಕಡಲಾಮೆ ಪತ್ತೆ! Mangalore](https://etvbharatimages.akamaized.net/etvbharat/prod-images/768-512-8435196-645-8435196-1597514100125.jpg)
ಬೃಹತ್ ಕಡಲಾಮೆ
ಹೊಸಬೆಟ್ಟು ಕಡಲ ತೀರದ ಬಳಿ ಆಟವಾಡುತ್ತಿದ್ದ ಬಾಲಕನಿಗೆ ದಡದ ಬಳಿ ಗಾಯಗೊಂಡು ಬಿದ್ದಿದ್ದ ಕಡಲಾಮೆ ಕಂಡಿದೆ. ಬಳಿಕ ಅದನ್ನು ಮೇಲಕ್ಕೆ ತಂದಿದ್ದಾನೆ. ಕಡಲಾಮೆಯ ಮುಂಭಾಗದ ಎರಡು ಕಾಲುಗಳ ಬಳಿ ಗಾಯವಾಗಿದೆ. ಬಳಿಕ ಸ್ಥಳೀಯರ ನೆರವಿನ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅವರ ಸುಪರ್ದಿಗೆ ಒಪ್ಪಿಸಲಾಯಿತು.