ಕರ್ನಾಟಕ

karnataka

ETV Bharat / state

ಬೆಳ್ತಂಗಡಿಯಲ್ಲಿ ಗೃಹಿಣಿ ಕೊಲೆ: ಪತಿ ಮೇಲೆ ಶಂಕೆ - ಬೆಳ್ತಂಗಡಿ ಪತಿಯಿಂದ ಪತ್ನಿ ಕೊಲೆ

ಬೆಳ್ತಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ, ಕರಾಯ ಸಮೀಪದ ಗೇರುಕಟ್ಟೆ ಎಂಬಲ್ಲಿ ಗೃಹಿಣಿಯೋರ್ವಳು ಕೊಲೆಯಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

House wife Murder In Beltangadi
ಗೃಹಿಣಿಯ ಕೊಲೆ ಪತಿ ಮೇಲೆ ಕೊಲೆ ಶಂಕೆ

By

Published : Dec 17, 2019, 7:48 PM IST

ಬೆಳ್ತಂಗಡಿ :ಇಲ್ಲಿನ ಕರಾಯ ಸಮೀಪದ ಗೇರುಕಟ್ಟೆ ಎಂಬಲ್ಲಿ ಗೃಹಿಣಿಯೋರ್ವಳನ್ನು ಕೊಲೆಯಾಗಿರುವ ವಿಷಯತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಗೇರುಕಟ್ಟೆ ನಿವಾಸಿ ಉಮರ್ ಫಾರೂಕ್ ಎಂಬುವವರ ಪತ್ನಿ ತಸ್ಲೀಮ ಎಂಬುವವರು ಮೃತಪಟ್ಟ ಗೃಹಿಣಿ, ಇವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದು, ಪತಿಯೇ ಪತ್ನಿಯನ್ನು ಕೊಲೆಗೈದಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಮನೆಯ ಶೌಚಾಲಯದಲ್ಲಿ ತಸ್ಲೀಮರವರ ಮೃತದೇಹ ಡಿ.17 ರಂದು ಪತ್ತೆಯಾಗಿದ್ದು, ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ ಹಾಗೂ ಬೆಳ್ತಂಗಡಿ ಎಸ್.ಐ ನಂದಕುಮಾರ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.ಕೊಲೆಗೆ ಸ್ಪಷ್ಟ ಕಾರಣ ತನಿಖೆ ನಂತರವಷ್ಟೆ ತಿಳಿಯಬೇಕಿದೆ.

ABOUT THE AUTHOR

...view details