ಕರ್ನಾಟಕ

karnataka

ETV Bharat / state

ಕೊರೊನಾ ವಿರುದ್ಧ ಹೋರಾಡಲು ಹೋಮಿಯೋಪತಿ ಔಷಧ ಪೂರಕ: ಡಾ. ವಿವೇಕಾನಂದ ವರ್ಣೇಕರ್

ಹೋಮಿಯೋಪತಿ ಔಷಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕವಾಗಿದ್ದು, ಕೋವಿಡ್​ ವಿರುದ್ಧ ಹೋರಾಡುವ ಪೋಲೀಸರಿಗೆ ಇದರ ಅಗತ್ಯ ಹೆಚ್ಚಿದೆ ಎಂದು ಯೆನಪೋಯ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ವಿವೇಕಾನಂದ ವರ್ಣೇಕರ್ ಹೇಳಿದರು.

ಕೊರೊನಾ ವಿರುದ್ಧ ಹೋರಾಡಲು ಹೋಮಿಯೋಪತಿ ಔಷಧ ಪೂರಕ
ಕೊರೊನಾ ವಿರುದ್ಧ ಹೋರಾಡಲು ಹೋಮಿಯೋಪತಿ ಔಷಧ ಪೂರಕ

By

Published : Jun 11, 2020, 6:06 PM IST

ಉಳ್ಳಾಲ (ದಕ್ಷಿಣ ಕನ್ನಡ): ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೋಮಿಯೋಪತಿ ಔಷಧ ಪೂರಕವಾಗಿದ್ದು, ಕೋವಿಡ್​ ವಿರುದ್ಧ ಹೋರಾಡುವ ಪೋಲೀಸರಿಗೆ ಇದರ ಅಗತ್ಯ ಹೆಚ್ಚಿದೆ ಎಂದು ಮಂಜನಾಡಿಯ ಯೆನಪೋಯ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ವಿವೇಕಾನಂದ ವರ್ಣೇಕರ್ ಹೇಳಿದರು.

ಕೊರೊನಾ ವಿರುದ್ಧ ಹೋರಾಡಲು ಹೋಮಿಯೋಪತಿ ಔಷಧ ಪೂರಕ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 7ನೇ ಪಡೆ, ಅಸೈಗೋಳಿ ಘಟಕದಲ್ಲಿ ಜಿಲ್ಲಾ ಆಯುಷ್ ಇಲಾಖೆ ಮಂಗಳೂರು ಮತ್ತು ಯೆನಪೋಯ ಹೋಮಿಯೋಪತಿ ಮೆಡಿಕಲ್ ಕಾಲೇಜು ಮಂಜನಾಡಿ ಸಹಯೋಗದಲ್ಲಿ ಪೊಲೀಸ್​ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಹೋಮಿಯೋಪತಿ ಮಾತ್ರೆಗಳ ವಿತರಣೆ ಮಾಡಲಾಯಿತು.

ಶಾಸಕ ಯು.ಟಿ ಖಾದರ್ ಮಾತ್ರೆಗಳನ್ನು ವಿತರಿಸಿದರು. ಜಿಲ್ಲಾ ಆಯುಷ್ ಇಲಾಖೆಯ ಡಾ. ಮೊಹಮ್ಮದ್ ಇಕ್ಬಾಲ್ ಅವರು ಕೋವಿಡ್-19 ಬಗ್ಗೆ ಮಾಹಿತಿ ನೀಡಿದರು.

ABOUT THE AUTHOR

...view details