ಕರ್ನಾಟಕ

karnataka

ETV Bharat / state

ಕೊಣಾಜೆ: ಮಳೆಗೆ ಮನೆ‌ ಕುಸಿದು ತೀವ್ರ ಹಾನಿ, ಮಹಿಳೆಗೆ ಗಾಯ - ಕೊಣಾಜೆ ಸುದ್ದಿ

ಮಳೆಯಿಂದಾಗಿ ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಮನೆ ಕುಸಿದು ತೀವ್ರ ಹಾನಿಯಾಗಿದೆ.

Home collapse
Home collapse

By

Published : Aug 20, 2020, 8:57 PM IST

​​​​​​ಕೊಣಾಜೆ (ಮಂಗಳೂರು):ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಮಳೆಗೆ ಮನೆ ಕುಸಿದು ತೀವ್ರ ಹಾನಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ.

ಗುರುವಾರ ಮುಂಜಾನೆ 6 ಗಂಟೆಯ ವೇಳೆಗೆ ತೀವ್ರವಾದ ಮಳೆ ಸುರಿಯಲಾರಂಭಿಸಿದ್ದು ಈ ಸಂದರ್ಭದಲ್ಲಿ ನರೇಕಳದ ಕೊರಗಪ್ಪ ಮೂಲ್ಯ ಎಂಬವರ ಮನೆಯ‌ ಮಾಡು ಏಕಾಏಕಿ ಕುಸಿದು‌ ಬಿದ್ದಿದೆ.

ಈ ಘಟನೆ ನಡೆದಾಗ ಮನೆಯಲ್ಲಿ ಸುಮಾರು 8 ಮಂದಿ ಇದ್ದು ಮನೆಯಿಂದ ಹೊರ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದೇ ಮನೆಯ ದೇವಕಿ ಎಂಬ ಮಹಿಳೆಗೆ ಕಾಲಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಮನೆಯ ಮಾಡು ಕುಸಿತದಿಂದ ಮನೆಯೊಳಗಿರುವ ವಸ್ತುಗಳಿಗೂ ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details