ಮಂಗಳೂರು :ಹಿಂದೂ ಸಂಘಟನೆಗಳ ಎಚ್ಚರಿಕೆ ಹಿನ್ನೆಲೆ ನಗರದಲ್ಲಿ ಪ್ರೇಮಿಗಳ ದಿನಾಚರಣೆ ನೀರಸವಾಗಿತ್ತು. ಪ್ರೇಮಿಗಳು ಮನೆಬಿಟ್ಟು ಹೊರ ಬರಲು ಹೆದರಿದ ಪರಿಣಾಮ ಇಲ್ಲಿನ ಪ್ರಮುಖ ಉದ್ಯಾನವನಗಳು ಖಾಲಿಯಾಗಿದ್ದವು.
ಮಂಗಳೂರಿನಲ್ಲಿ ಪ್ರೇಮಿಗಳ ದಿನಾಚರಣೆ ನೀರಸ.. ಹಿಂದೂ ಸಂಘಟನೆಗಳು ಪಾಶ್ಚಿಮಾತ್ಯ ಸಂಸ್ಕೃತಿಯಾಗಿರುವ ಪ್ರೇಮಿಗಳ ದಿನಾಚರಣೆಯನ್ನು ಭಾರತದಲ್ಲಿ ಆಚರಣೆ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಮಂಗಳೂರಿನಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಬಾರದೆಂದು ಸಂಘಟನೆಯೊಂದಕ್ಕೆ ಸೇರಿದ್ದನೆನ್ನಲಾದ ವ್ಯಕ್ತಿಯೋರ್ವನು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡಿದ್ದ.
ಓದಿ:ಮೀಸಲಾತಿ ಹೋರಾಟಕ್ಕೆ ವೀರಶೈವ ಶ್ರೀಗಳ ಬೆಂಬಲ ಖುಷಿ ಕೊಟ್ಟಿದೆ: ಜಯಮೃತ್ಯುಂಜಯ ಸ್ವಾಮೀಜಿ
ಈ ಹಿಂದೆ ನಗರದ ಕದ್ರಿ, ಪಿಲಿಕುಳ ಉದ್ಯಾನವನಗಳಿಗೆ ಪ್ರೇಮಿಗಳ ದಿನಾಚರಣೆಯ ದಿನದಂದು ಯುವಕ-ಯುವತಿಯ ಜೋಡಿಗಳ ಮೇಲೆ ದಾಳಿ ನಡೆಸಲಾಗಿತ್ತು. ಅದರಂತೆ ಈ ಬಾರಿಯೂ ಎಚ್ಚರಿಕೆ ಕೇಳಿ ಬಂದಿತ್ತು.
ಈ ಹಿನ್ನೆಲೆ ಇಂದು ಪ್ರೇಮಿಗಳ ದಿನಾಚರಣೆ ಇದ್ದರೂ ಉದ್ಯಾನವನಗಳು ಖಾಲಿಯಾಗಿದ್ದವು. ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿರುವ ಹಿಂದೂ ಸಂಘಟನೆಗಳು ಪುಲ್ವಾಮ ದಾಳಿಯ ದ್ಯೋತಕವಾಗಿ ಹುತಾತ್ಮರ ದಿನಾಚರಣೆ ಆಚರಿಸಿದವು.