ಬಂಟ್ವಾಳ: ತಾಲೂಕಿನ ಕಲ್ಲಡ್ಕ ಸಮೀಪ ಕುದ್ರೆಬೆಟ್ಟುವಿನಲ್ಲಿ ತಡರಾತ್ರಿ ನಡೆದ ಓಮ್ನಿ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾನೆ.
ಬಂಟ್ವಾಳ: ರಸ್ತೆ ಅಪಘಾತದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸಾವು - Accident in Bantwal
ಬಂಟ್ವಾಳ ತಾಲೂಕಿನಲ್ಲಿ ಓಮ್ನಿ ಮತ್ತು ಬೈಕ್ ನಡುವೆ ಅಪಘಾತದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಯತಿರಾಜ್ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಹಿಂದು ಸಂಘಟನೆ ಕಾರ್ಯಕರ್ತ ಸಾವು
ಕಲ್ಲಡ್ಕ ನಿವಾಸಿ ಯತಿರಾಜ್ (30) ಮೃತ ವ್ಯಕ್ತಿ. ಕುದ್ರೆಬೆಟ್ಟು ಎಂಬಲ್ಲಿ ಓಮ್ನಿ ಮತ್ತು ಬೈಕ್ ಭಾನುವಾರ ತಡರಾತ್ರಿ ಡಿಕ್ಕಿಯಾಗಿತ್ತು. ಗಾಯಗೊಂಡಿದ್ದ ಯತಿರಾಜ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಯತಿರಾಜ್ ಮೃತಪಟ್ಟಿದ್ದಾರೆ. ಈ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.