ಉಪ್ಪಿನಂಗಡಿ:ನಗರದ ಬಸ್ ನಿಲ್ದಾಣದ ಸಮೀಪ ಆಗಮಿಸಿದ ಕಲ್ಲೇರಿ ಜನತಾ ಕಾಲನಿ ನಿವಾಸಿಯೊಬ್ಬರು ಕಾಲು ಜಾರಿ ನದಿಗೆ ಬಿದ್ದು, ಸ್ವಲ್ಪ ದೂರ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ದೃಶ್ಯವನ್ನ ಗಮನಿಸುತ್ತಿದ್ದ ನೂರಾರು ಜನರು ವ್ಯಕ್ತಿ ಕೊಚ್ಚಿಕೊಂಡು ಹೋಗುವುದನ್ನ ನೋಡುತ್ತಿದ್ದರೇ ಹೊರತು ರಕ್ಷಣೆಗೆ ಮುಂದಾಗಿರಲಿಲ್ಲ.
ಆದರೆ ಅಲ್ಲಿಗೆ ಬಂದಿದ್ದ ಕೊಕ್ಕಡ ನಿವಾಸಿ ರವಿ ಶೆಟ್ಟಿ, ಈ ಘಟನೆಯನ್ನ ನೋಡಿದ ಕೂಡಲೇ ನದಿಗೆ ಹಾರಿ ಆ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ನೀರಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ನದಿಯ ಕೆಸರಿದ್ದ ಭಾಗದಲ್ಲಿ ಸಿಕ್ಕಿ ಹಾಕಿಕೊಂಡು ಕಾಲು ಹೂತು ಹೋಗಿ, ಮುಳುಗುತ್ತಿದ್ದರು. ಆ ಜಾಗ ಕೆಸರು ಹಾಗೂ ಹುಲ್ಲಿನಿಂದ ಆವೃತವಾಗಿದ್ದ ಕಾರಣ ರವಿ ಶೆಟ್ಟಿ ಅವರೂ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ಹರಸಾಹಸ ಪಡಬೇಕಾಯಿತು.
ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದ ವ್ಯಕ್ತಿಯ ರಕ್ಷಣೆ ಈ ವೇಳೆ, ಸ್ಥಳದಲ್ಲಿದ್ದ ಗೃಹ ರಕ್ಷಕ ದಳದ ಸಿಬಂದಿಯೊಬ್ಬರು ನದಿಯ ಆಚೆ ಬದಿಯಿಂದ ಹಗ್ಗವೊಂದರ ತುದಿಯನ್ನು ಮರಕ್ಕೆ ಕಟ್ಟಿ ಮತ್ತೊಂದು ತುದಿಯನ್ನು ರವಿ ಶೆಟ್ಟಿ ಅವರು ಇದ್ದ ಕಡೆ ಎಸೆದಿದ್ದಾರೆ. ಈ ಹಗ್ಗವನ್ನ ಶೆಟ್ಟಿ ಅವರು ಮುಳುಗುತ್ತಿದ್ದ ವ್ಯಕ್ತಿಯ ಸೊಂಟಕ್ಕೆ ಕಟ್ಟಿ, ಈ ಮೂಲಕ ಅವರನ್ನು ಮುಳುಗದಂತೆ ನೋಡಿಕೊಂಡಿದ್ದಾರೆ.
ಬಳಿಕ ಗೃಹ ರಕ್ಷಕದಳದ ಸಿಬ್ಬಂದಿ ಬೋಟ್ ಸಹಾಯದಿಂದ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನ ಉಪ್ಪಿನಂಗಡಿ ದೇಗುಲದ ಬಳಿ ದಡಕ್ಕೆ ತಂದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಗೃಹ ರಕ್ಷಕ ದಳದ ಈಜುಗಾರ ಚೆನ್ನಪ್ಪ, ಸಿಬ್ಬಂದಿ ಜನಾರ್ದನ, ನಾರಾಯಣ ಅವರು ಇದ್ದರು.
ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದ ವ್ಯಕ್ತಿಯ ರಕ್ಷಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗಳು ವ್ಯಾಪಕ ಚರ್ಚೆಗೊಳ್ಳುತ್ತಿರುವ ಹೊತ್ತಿನಲ್ಲಿ ಧರ್ಮವನ್ನು ಮೀರಿ ಮುಸ್ಲಿಂ ವ್ಯಕ್ತಿಯ ಜೀವ ರಕ್ಷಿಸಿದ ರವಿ ಶೆಟ್ಟಿ ಅವರ ಸಾಹಸಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.