ಕರ್ನಾಟಕ

karnataka

ETV Bharat / state

ಅಯೋಧ್ಯೆಯಲ್ಲಿ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ರಾಮಲಲ್ಲಾನ ಪ್ರತಿಷ್ಠಾಪನೆ: ಹಿಂದೂ ಮಹಾಸಭಾ

ಚುನಾವಣೆ ಉದ್ದೇಶದಿಂದ ರಾಮ ಮಂದಿರವನ್ನು ಉದ್ಘಾಟನೆ ಮಾಡುವುದು ಧರ್ಮಶಾಸ್ತ್ರಕ್ಕೆ ವಿರೋಧ ಎಂದು ಹಿಂದೂ ಮಹಾಸಭಾ ಸಂಸ್ಥಾಪಕ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ವಿರುದ್ಧ ಹಿಂದೂ ಮಹಾಸಭಾ ಆಕ್ರೋಶ
ಬಿಜೆಪಿ ವಿರುದ್ಧ ಹಿಂದೂ ಮಹಾಸಭಾ ಆಕ್ರೋಶ

By ETV Bharat Karnataka Team

Published : Jan 18, 2024, 7:25 PM IST

Updated : Jan 18, 2024, 8:43 PM IST

ಬಿಜೆಪಿ ವಿರುದ್ಧ ಹಿಂದೂ ಮಹಾಸಭಾ ಆಕ್ರೋಶ

ಮಂಗಳೂರು: ಕೇಂದ್ರ ಸರ್ಕಾರವು ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶ್ರೀರಾಮ ಮಂದಿರವನ್ನು ಅಪೂರ್ಣಾವಸ್ಥೆಯಲ್ಲಿ ಉದ್ಘಾಟನೆ ಮಾಡುವುದು ಧರ್ಮಶಾಸ್ತ್ರಕ್ಕೆ ಮಾಡುವ ಅಪಚಾರ‌ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಾಮನ ವಿಚಾರದಲ್ಲಿ ಭಂಡತನ ಮಾಡಿ, ಶಾಸ್ತ್ರಗಳನ್ನು ಅನುಷ್ಠಾನಕ್ಕೆ ತರದೆ ಮಂತ್ರಾಕ್ಷತೆಯನ್ನು ಇಷ್ಟದ ಪ್ರಕಾರ ಮಾಡಿಕೊಂಡು ಕೇವಲ ಬೂಟಾಟಿಕೆಯ ರಾಜಕೀಯ ಮಾಡಿದರೆ ಶ್ರೀರಾಮನ ಶಾಪ ತಟ್ಟಲಿದೆ. ಪೂರ್ಣಪ್ರಮಾಣದ ದೇವಸ್ಥಾನ ನಿರ್ಮಾಣದ ಮೊದಲೇ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮಮಂದಿರದ ಉದ್ಘಾಟನೆ ಮಾಡುವುದು ಧರ್ಮಶಾಸ್ತ್ರಕ್ಕೆ ವಿರುದ್ಧ. ಶಾಸ್ತ್ರಕ್ಕೆ ಅಪಚಾರ ಆಗಿರುವುದರಿಂದ ಇದನ್ನು ಹಿಂದೂ ಮಹಾಸಭಾ ಬಲವಾಗಿ ಖಂಡಿಸುತ್ತದೆ ಎಂದಿದ್ದಾರೆ.

ಮೊಘಲ್, ಟಿಪ್ಪು ಕಾಲದಲ್ಲಿ ಶಂಕರಾಚಾರ್ಯರ ಪೀಠದ ಮೇಲೆ ನಿರಂತರ ಆಕ್ರಮಣಗಳು ನಡೆದಿವೆ. ಇದೀಗ ಕೇಂದ್ರದ ಬಿಜೆಪಿ ಸರ್ಕಾರವೂ ಶಂಕರಾಚಾರ್ಯರನ್ನು ಅವಹೇಳನ ಮಾಡುವಂತಹ ಕಾರ್ಯವನ್ನು ಮಾಡುತ್ತಿದೆ. ಶ್ರೀರಾಮನ ವಿಚಾರವನ್ನು ಸಂಭ್ರಮಿಸಬೇಕಾದ ಈ ಕಾಲದಲ್ಲಿ ಅದಕ್ಕೆ ಹೋರಾಟ ಮಾಡಿದವರನ್ನೇ ಬದಿಗೊತ್ತಿರುವುದು ಶ್ರೀರಾಮನನ್ನು ಚುನಾವಣಾ ಸರಕನ್ನಾಗಿ ಮಾಡಿರುವುದು ಒಪ್ಪುವಂತಹದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮಮಂದಿರ ನಿರ್ಮಾಣಕ್ಕೆ ಮುಂಚೂಣಿ ಹೋರಾಟದಲ್ಲಿದ್ದ ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ, ಸಾಧು ಸಂತರ ವ್ಯವಸ್ಥೆಯನ್ನು ದೂರವಿಟ್ಟು ಕೇಂದ್ರ ಸರ್ಕಾರ ರಾಮಮಂದಿರವನ್ನು ಉದ್ಘಾಟಿಸಲು ಹೊರಟಿದೆ. ಅಯೋಧ್ಯೆ ವಿವಾದದ ಮೂಲ ವಕಾಲತ್ತುದಾರ ಮತ್ತು ಹಿಂದೂ ಮಹಾಸಭಾಕ್ಕೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವೇ ಇಲ್ಲ. ಹಿಂದೂ ವಿರೋಧಿ ನಡುವಳಿಕೆಯಿಂದಲೇ ಬಿಜೆಪಿ ಕರ್ನಾಟಕದಲ್ಲಿ ಸೋತಿರುವುದು. ಈಗ ಪ್ರಭು ಶ್ರೀರಾಮನ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಅದನ್ನು ಹಿಂದೂ ಮಹಾಸಭಾ ಒಪ್ಪುವುದಿಲ್ಲ ಎಂದು ರಾಜೇಶ್ ಪವಿತ್ರನ್ ಹೇಳಿದ್ದಾರೆ.

ಇದನ್ನೂ ಓದಿ:ಮಸೀದಿ ಕೆಡವಿ ರಾಮ ಮಂದಿರ ನಿರ್ಮಿಸಿದ್ದು ಒಪ್ಪುವುದಿಲ್ಲ: ಉದಯನಿಧಿ ಸ್ಟಾಲಿನ್​

Last Updated : Jan 18, 2024, 8:43 PM IST

ABOUT THE AUTHOR

...view details