ಕರ್ನಾಟಕ

karnataka

ETV Bharat / state

ಲವ್ ಜಿಹಾದ್ ಮತ್ತು ಅತ್ಯಾಚಾರ ಪ್ರಕರಣ ವಿರೋಧಿಸಿ ಹಿಂದು ಜಾಗರಣ ವೇದಿಕೆ ಪ್ರತಿಭಟನೆ - ಪುತ್ತೂರು ಅಪ್ಡೇಟ್‌

ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿತು.

Hindu Jagarana Vedike protest  in Puttur
ಹಿಂದು ಜಾಗರಣ ವೇದಿಕೆ ಪ್ರತಿಭಟನೆ

By

Published : Oct 9, 2020, 8:31 AM IST

ಪುತ್ತೂರು: ದೇಶದಾದ್ಯಂತ ನಡೆಯುತ್ತಿರುವ ಲವ್ ಜಿಹಾದ್ ಮತ್ತು ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಪ್ರತಿಭಟನೆ ನಡೆಸಿತು.

ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಮಾತೃ ಸಂಯೋಜಕ ಗಣರಾಜ ಭಟ್ ಕೆದಿಲ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ವಿಭಜನೆಯಾದಾಗ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಭಾರತ ದೇಶ ನಮ್ಮದಾಗಬೇಕು ಎಂಬ ಕನಸು ಕಂಡಿದ್ದರು. ಇಂದು ಹಲವು ರೀತಿಯ ಜಿಹಾದ್‌ಗಳ ಮೂಲಕ ಆತನ ಕನಸನ್ನು ನನಸು ಮಾಡುವ ದಂಧೆ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದು ಜಾಗರಣ ವೇದಿಕೆ ಪ್ರತಿಭಟನೆ

ಲವ್ ಜಿಹಾದ್ ಧರ್ಮ ಯುದ್ಧವಲ್ಲ. ಅದೊಂದು ಮತೀಯ ಆಕ್ರಮಣ. ಪ್ರೀತಿಯ ನಾಟಕ, ಶಿಕ್ಷಣ ಮೊದಲಾದ ಜಿಹಾದ್‌ಗಳ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಸುಲಭ ವಿಧಾನವಾಗಿದೆ ಎಂದರು.

ಪ್ರತಿಯೊಬ್ಬರ ಮನೆ ಮನೆಗಳಲ್ಲಿಯೂ ಜಾಗೃತಿಯಾಗಬೇಕು. ಹಿಂದು ಜಾಗರಣ ವೇದಿಕೆ ಸ್ವಾರ್ಥಕ್ಕಾಗಿ ದುಡಿಯುತ್ತಿಲ್ಲ. ಹಿಂದೂ ಸಮಾಜದ ಜಾಗೃತಿ, ರಕ್ಷಣೆಗಾಗಿ ಸದಾ ಸಿದ್ಧವಾಗಿದೆ. ಕಾನೂನುಗಳಿಗೆ ಒಳಪಟ್ಟುಕೊಂಡು ಜಾಗರಣ ವೇದಿಕೆ ಕೆಲಸ ಮಾಡುತ್ತಿದೆ ಎಂದರು.

ABOUT THE AUTHOR

...view details