ಪುತ್ತೂರು: ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಓರ್ವ ಯುವತಿ ಸೇರಿದಂತೆ ನಾಲ್ವರು ಯುವಕರನ್ನು ಹಿಡಿದಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಂಜಾ ಸೇವಿಸಿ ಅಕ್ರಮ: ಯುವತಿ ಸೇರಿ ನಾಲ್ವರನ್ನು ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು - Hindu activists
ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪುತ್ತೂರು
ಬಿರುಮಲೆ ಬೆಟ್ಟದಲ್ಲಿ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಪಡೆದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಈ ವೇಳೆ ಕೇರಳ ರಾಜ್ಯದಲ್ಲಿ ನೋಂದಣಿಯಾಗಿರುವ ಕಾರಿನಲ್ಲಿ ಬಂದಿದ್ದ ಈ ತಂಡದಲ್ಲಿ ಓರ್ವ ಯುವತಿ ನಾಲ್ವರು ಯುವಕರಿದ್ದರು.
ಪೊಲೀಸರು ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಪುಸಲಾಯಿಸಿ ಕಾರಿನಲ್ಲಿ ಕರೆತಂದು ಮಾದಕ ದ್ರವ್ಯ ತಿನ್ನಿಸಿ ಯುವತಿಯನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಬೃಹತ್ ಜಾಲವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.