ಕರ್ನಾಟಕ

karnataka

ETV Bharat / state

ಪಡೀಲು ಬೈಪಾಸ್ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ - manglore news Hill collapsed

ಕಾರವಾರ-ಕೆಎಸ್ಆರ್ ಬೆಂಗಳೂರು ವಿಶೇಷ ರೈಲು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಸಂಚರಿಸಲಿದೆ ಎಂದು ಸ್ಟೇಷನ್ ಮಾಸ್ಟರ್ ತಿಳಿಸಿದ್ದಾರೆ..

manglore
ಗುಡ್ಡ ಕುಸಿತ

By

Published : Sep 20, 2020, 8:26 PM IST

ಮಂಗಳೂರು :ಭಾರೀ ಮಳೆಯ ಪರಿಣಾಮ ನಗರದ ಪಡೀಲು ಬಳಿಯ ಬೈಪಾಸ್ ರೈಲು ಮಾರ್ಗದಲ್ಲಿ ಇಂದು ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಗುಡ್ಡ ಕುಸಿತವಾಗಿದೆ.

ಪಡೀಲು ಬೈಪಾಸ್ ರೈಲು ಮಾರ್ಗ

15 ಮೀ. ಉದ್ದ ಹಾಗೂ 15 ಮೀ. ಅಗಲದಲ್ಲಿ ರೈಲು ಹಳಿಯ ಮೇಲೆ ಮಣ್ಣು ಕುಸಿತವಾಗಿದೆ. ಪರಿಣಾಮ ವಯಾ ಮೈಸೂರು ಮಾರ್ಗದ ಕೊಂಕಣ ರೈಲ್ವೆ ಬೈಪಾಸ್ ಮಾರ್ಗದಲ್ಲಿ ಸಂಚಾರ ಅಡಚಣೆ ಸಂಭವಿಸಿದೆ. ಆದರೆ, ಪ್ರಯಾಣಿಕರ ರೈಲು ಸಂಚಾರಕ್ಕೆ ಯಾವುದೇ ಅಡ್ಡಿಯಾಗುತ್ತಿಲ್ಲ‌.

ಕಾರವಾರ-ಕೆಎಸ್ಆರ್ ಬೆಂಗಳೂರು ವಿಶೇಷ ರೈಲು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಸಂಚರಿಸಲಿದೆ ಎಂದು ಸ್ಟೇಷನ್ ಮಾಸ್ಟರ್ ತಿಳಿಸಿದ್ದಾರೆ.

ABOUT THE AUTHOR

...view details