ಬಂಟ್ವಾಳ:ರಸ್ತೆಗೆ ಗುಡ್ಡ ಜರಿದು ಬಿದ್ದ ಕಾರಣದಿಂದ ಬಿ.ಸಿ.ರೋಡು ಉಳ್ಳಾಲ ರಸ್ತೆ ಸಂಚಾರಕ್ಕೆ ಅಡಚಣೆ ಯಾಯಿತು.
ಗುಡ್ಡ ಜರಿದು ಬಿ.ಸಿ.ರೋಡ್-ಉಳ್ಳಾಲ ಸಂಚಾರಕ್ಕೆ ಅಡಚಣೆ - Bhantvala latest news
ಮಂಗಳೂರು ತಾಲೂಕಿನ ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಕೋಡಿ ಎಂಬಲ್ಲಿ ರಸ್ತೆಯ ಬದಿಯಲ್ಲಿದ್ದ ಗುಡ್ಡ ಜರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಬಂಟ್ವಾಳ ಗುಡ್ಡ ಕುಸಿತ
ಮಂಗಳೂರು ತಾಲೂಕಿನ ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಕೋಡಿ ಎಂಬಲ್ಲಿ ರಸ್ತೆಯ ಬದಿಯಲ್ಲಿದ್ದ ಗುಡ್ಡ ರಾತ್ರಿಯಿಂದ ಸುರಿಯುತ್ತಿರುವ ಜೋರು ಮಳೆಗೆ ಜರಿದು ರಸ್ತೆಗೆ ಬಿದ್ದಿದೆ. ಹಾಗಾಗಿ, ವಾಹನ ಸಂಚಾರ ಬಂದ್ ಆಗಿತ್ತು. ಈ ವೇಳೆ ಬೇರೆ ರಸ್ತೆಯ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಬಿ.ಸಿ.ರೋಡಿನಿಂದ ಮೆಲ್ಕಾರ್ ಬೋಳ್ಯಾರು ಮೂಲಕ ಮಂಗಳೂರು ಸಂಚಾರ ಮಾಡುವ ಬಸ್ ಹಾಗೂ ಇತರೆ ವಾಹನಗಳು ಬೋಳ್ಯಾರ್‌ನಿಂದ ಕುರ್ನಾಡು ಮೂಲಕ ಮುಡಿಪುವಿಗೆ ಹೋಗಲು ಬದಲಿ ವ್ಯವಸ್ಥೆ ಮಾಡಲಾಯಿತು.