ಕರ್ನಾಟಕ

karnataka

ETV Bharat / state

ವಿಟ್ಲ ಪಟ್ಟಣ ಪಂಚಾಯತ್​​ಗೆ ಪ್ರೌಢಶಾಲೆ ಮಂಜೂರು: ಶಾಸಕ ಮಠಂದೂರು - High School sanctioned

ಸಿಎಂ ಈಗಾಗಲೇ ಹಲವು ರೀತಿಯ ನಿಗಮಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ರಚನೆ ಮಾಡಿ ಸಚ್ಚಿದಾನಂದ ಮೂರ್ತಿ ಅವರನ್ನು ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆಂದು ಶಾಸಕ ಸಂಜೀವ ಮಠಂದೂರು ಹರ್ಷ ವ್ಯಕ್ತಪಡಿಸಿದ್ದಾರೆ.

mla-sanjeeva-matandoor
ಶಾಸಕ ಸಂಜೀವ ಮಠಂದೂರು

By

Published : Aug 14, 2020, 6:59 PM IST

ಮಂಗಳೂರು:ಶೈಕ್ಷಣಿಕ ಕೇಂದ್ರವಾಗಿರುವ ವಿಟ್ಲ ಪಟ್ಟಣ ಪಂಚಾಯತ್​​ಗೆ ಪ್ರೌಢಶಾಲೆ ಮಂಜೂರಾಗಿದ್ದು, ಈ ಸಾಲಿನಿಂದ ಸಮಗ್ರ ಕರ್ನಾಟಕ ಶಿಕ್ಷಣ ನೀತಿಯಡಿ 9 ಹಾಗೂ 10ನೇ ತರಗತಿಗಳು ಆರಂಭಗೊಳ್ಳಲಿವೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈಗಾಗಲೇ ವಿಟ್ಲ ಪಟ್ಟಣ ಪಂಚಾಯತ್ ಹಲವು ಶೈಕ್ಷಣಿಕ ಕೇಂದ್ರವನ್ನು ಹೊಂದಿದ್ದು, ಸರ್ಕಾರಿ ಪ್ರಥಮದರ್ಜೆ, ಪ್ರಾಥಮಿಕ ಶಾಲೆಗಳು ಇವೆ. ಸಚಿವ ಸುರೇಶ್ ಕುಮಾರ್ ಇಲ್ಲಿಗೆ ಭೇಟಿ ನೀಡಿದ್ದು, ಇಲ್ಲಿಯ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿ ಪ್ರೌಢಶಾಲೆ ಮಂಜೂರುಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿರುವ ಇಲ್ಲಿಗೆ ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.

ಶಾಸಕ ಸಂಜೀವ ಮಠಂದೂರು

ಈ ಸಾಲಿನಿಂದ ಆಂಗ್ಲ ಮಾಧ್ಯಮ ಎಲ್‌ಕೆಜಿ, ಯುಕೆಜಿ, ಫಸ್ಟ್ ಹಾಗೂ ಸೆಕೆಂಡ್ ತರಗತಿಗಳು ನಡೆಯಲಿದ್ದು ಸರ್ಕಾರಿ ವ್ಯವಸ್ಥೆಯಡಿ ಉಚಿತ ಶಿಕ್ಷಣ ಇಲ್ಲಿಯ ಜನತೆಗೆ ಸಿಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ABOUT THE AUTHOR

...view details