ಕಡಬ:ಕಡಬ ತಾಲೂಕಿನಲ್ಲಿ ಬರುವ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕೊಣಾಜೆ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರನ್ನು ಕಾಡಾನೆಗಳ ಹಿಂಡು ಬೆನ್ನಟ್ಟಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ಕಾಡಾನೆಗಳು ಓಡಿಸಿದ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ರಬ್ಬರ್ ನಿಗಮದ ಟ್ಯಾಪಿಂಗ್ ಕಾರ್ಮಿಕ ರಾಜಗೋಪಾಲ್ (49), ಮೇಸ್ತ್ರಿಗಳಾದ ನಾಗಪ್ಪ (53) ಹಾಗೂ ಶಿವರಾಜ್ (43) ಎಂದು ಗುರುತಿಸಲಾಗಿದೆ.
ಕಡಬ: ರಬ್ಬರ್ ಟ್ಯಾಪಿಂಗ್ ಕಾರ್ಮಿಕರನ್ನು ಬೆನ್ನಟ್ಟಿದ ಕಾಡಾನೆ ಹಿಂಡು, ಮೂವರಿಗೆ ಗಾಯ - ಕಡಬದ ಸುದ್ದಿ
Wild elephant chased workers: ಕಾಡಾನೆಗಳು ಬೆನ್ನಟ್ಟಿಕೊಂಡು ಬಂದ ವೇಳೆ ಕಾರ್ಮಿಕರು ತಪ್ಪಿಸಿಕೊಳ್ಳು ಓಡಿದ್ದು, ಈ ವೇಳೆ ಬಿದ್ದು ಕಾರ್ಮಿಕರಿಗೆ ತೆರಚಿದ ಗಾಯಗಳಾಗಿವೆ.
Published : Dec 16, 2023, 1:28 PM IST
ಗಾಯಾಳುಗಳನ್ನು ಕಡಬದ ಸಮುದಾಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಬೆಳಗ್ಗೆ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಈ ವೇಳೆ ಭಯಭೀತರಾದ ಕಾರ್ಮಿಕರು ಓಡಿ ತಪ್ಪಿಸಿಕೊಳ್ಳುವ ವೇಳೆ ಬಿದ್ದು ತೆರಚಿದ ಗಾಯಗಳಾಗಿವೆ. ಓಡುವ ವೇಳೆ ಆನೆಗಳು ಅವರನ್ನು ಬೆನ್ನಟ್ಟಿವೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕಾಡಾನೆಗಳು ಈ ಪ್ರದೇಶದಲ್ಲೇ ಬೀಡು ಬಿಟ್ಟಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಮನೆ ಮೇಲೆಯೇ ಬೈನೆ ಮರ ಬೀಳಿಸಿ ತಿಂದು ಹೋದ ಕಾಡಾನೆಗಳ ಪಡೆ