ಕರ್ನಾಟಕ

karnataka

ETV Bharat / state

ಬಂಟ್ವಾಳ: ಒಂದೇ ಪ್ರದೇಶದ 33 ಮನೆಗಳನ್ನು ಜಖಂಗೊಳಿಸಿದ ಬಿರುಗಾಳಿ - ಮನೆಗಳಿಗೆ ಹಾನಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಬೀಸಿದ ಭಾರಿ ಬಿರುಗಾಳಿ ಸಾಕಷ್ಟು ಮನೆಗಳಿಗೆ ಹಾನಿಯುಂಟು ಮಾಡಿದೆ.

heavy storm in bantwal
ಬಿರುಗಾಳಿಯಿಂದ ಮನೆಗಳಿಗೆ ಹಾನಿ

By

Published : Mar 31, 2021, 10:55 AM IST

ಬಂಟ್ವಾಳ: ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುಮಾರು ಒಂದು ಗಂಟೆ ಭಾರಿ ಗಾಳಿಯೊಂದಿಗೆ ಸುರಿದ ಮಳೆ, ಬಂಟ್ವಾಳ ತಾಲೂಕಿನ ಹಲವೆಡೆ ಜನಜೀವನ ಅಸ್ತವ್ಯಸ್ತಗೊಳಿಸಿದೆ.

ಬಿರುಗಾಳಿಯಿಂದ ಮನೆಗಳಿಗೆ ಹಾನಿ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮವೊಂದರಲ್ಲೇ 33 ಮನೆಗಳಿಗೆ ಹಾನಿಯಾಗಿದೆ. ಬಿ.ಮೂಡ ಗ್ರಾಮದ ಕಾಮಾಜೆ, ಮೈರಾನ್ ಪಾದೆ, ದೈಪಲ ಎಂಬಲ್ಲಿ ರಾತ್ರಿ ಸುಮಾರು 10 ಗಂಟೆಗೆ ಬೀಸಿದ ಭಾರಿ ಗಾಳಿ, ಮಳೆಗೆ ಒಟ್ಟು 33 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 2 ಮನೆಗಳಿಗೆ ತೀವ್ರ ಹಾನಿಯುಂಟಾಗಿದೆ. ಸುಮಾರು 3,53,000 ರೂ ನಷ್ಟವುಂಟಾಗಿದೆ ಎಂದು ಕಂದಾಯ ಇಲಾಖೆ ಅಂದಾಜಿಸಿದೆ.

ಬಿರುಗಾಳಿಯಿಂದ ಮನೆಗಳಿಗೆ ಹಾನಿ

ತಾಲೂಕಿನಲ್ಲಿ ಸುಮಾರು 60 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಇವಲ್ಲದೇ ಅಮ್ಮುಂಜೆ, ಬೆಂಜನಪದವು, ಕಳ್ಳಿಗೆ, ಅಮ್ಟಾಡಿ, ನರಿಕೊಂಬು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ, ಕೃಷಿ ಜಮೀನಿಗೂ ಅಪಾರ ಹಾನಿಯುಂಟಾಗಿದೆ. ಭಾರಿ ಮಳೆಗೆ ಎಚ್. ಟಿ. ಲೈನ್ ಮೇಲೆಯೇ ಮರಗಳು ಉರುಳಿವೆ.

ABOUT THE AUTHOR

...view details