ಕರ್ನಾಟಕ

karnataka

ETV Bharat / state

ದ.ಕ. ಜಿಲ್ಲೆಯಾದ್ಯಂತ ಜು.22ರವರೆಗೆ ರೆಡ್ ಅಲರ್ಟ್ ಘೋಷಣೆ - undefined

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜುಲೈ 22ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರೆಡ್​ ಅಲರ್ಟ್​ ಘೋಷಿಸಿದೆ.

ದ.ಕ.ಜಿಲ್ಲೆಯಾದ್ಯಂತ ಜು.22ರವರೆಗೂ ಭಾರೀ ಮಳೆ ಸಾಧ್ಯತೆ...ರೆಡ್ ಅಲರ್ಟ್ ಘೋಷಣೆ

By

Published : Jul 19, 2019, 5:12 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜುಲೈ 22ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರೆಡ್​ ಅಲರ್ಟ್​ ಘೋಷಿಸಿದೆ.

ದ.ಕ.ಜಿಲ್ಲೆಯಾದ್ಯಂತ ಜು.22ರವರೆಗೂ ಭಾರಿ ಮಳೆ ಸಾಧ್ಯತೆ... ರೆಡ್ ಅಲರ್ಟ್ ಘೋಷಣೆ

ಜಿಲ್ಲಾಯಾದ್ಯಂತ ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇಂದೂ ಕೂಡ ಮುಂದುವರೆದಿದೆ. ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ವಾಹನ‌ ಸವಾರರು ಪರದಾಡುವಂತಾಗಿದೆ. ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಉಳ್ಳಾಲದ ಸುತ್ತಮುತ್ತ ಕಡಲ್ಕೊರೆತ ಭೀತಿ ಹೆಚ್ಚಿದೆ. ತೀವ್ರ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್‌ ರೂಂ ನಂಬರ್​ 1077ಗೆ ಕರೆ ಮಾಡಿ ಸಾರ್ವಜನಿಕರು ದೂರು ನೀಡಲು ವ್ಯವಸ್ಥೆ ಮಾಡಲಾಗಿದೆ.

ಇನ್ನು, ಹೆಚ್ಚಿನ ಮಳೆಯಾಗುವ ಸಂಭವವಿದ್ದು, ಮೀನುಗಾರರು ಪ್ರವಾಸಿಗರು, ಸಾರ್ವಜನಿಕರು ಸಮುದ್ರ ಹಾಗೂ ನದಿಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

For All Latest Updates

TAGGED:

ABOUT THE AUTHOR

...view details