ಮಂಗಳೂರು: ನಗರದಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ನಗರದ ಕೋಡಿಕಲ್ನಲ್ಲಿ ಕಾಂಪೌಂಡ್ ಕುಸಿದು ಮನೆಗೆ ಹಾನಿಯಾಗಿದೆ.
ಮಂಗಳೂರಿನಲ್ಲಿ ಅಕಾಲಿಕ ಮಳೆ: ಕಾಂಪೌಂಡ್ ಕುಸಿದು ಮನೆಗೆ ಹಾನಿ - heavy raining in Mangalore reason for create a huge loss
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಕೋಡಿಕಲ್ 4ನೇ ಕ್ರಾಸ್ನಲ್ಲಿರುವ ನಡಿಗುತ್ತು ಕಾಂಪೌಂಡ್ ಎಂಬಲ್ಲಿ ಹತ್ತಿರದ ಕಾಂಪೌಂಡ್ ಒಂದು ಕುಸಿದು ಮನೆಗೆ ಹಾನಿಯಾಗಿದೆ.
ಮಂಗಳೂರಿನಲ್ಲಿ ಮಳೆ
ಮಂಗಳೂರಿನಲ್ಲಿ ನಿನ್ನೆ ರಾತ್ರಿ 11 ಗಂಟೆಗೆ ಗುಡುಗು, ಸಿಡಿಲು, ಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿದಿತ್ತು. ಸುಮಾರು 12.30ಗಂಟೆ ಸುಮಾರಿಗೆ ಕೋಡಿಕಲ್ 4ನೇ ಕ್ರಾಸ್ನಲ್ಲಿರುವ ನಡಿಗುತ್ತು ಕಾಂಪೌಂಡ್ ಎಂಬಲ್ಲಿ ಹತ್ತಿರದ ಕಾಂಪೌಂಡ್ ಒಂದು ಕುಸಿದು ಮನೆಗೆ ಹಾನಿಯಾಗಿದೆ.
ಕಾಂಪೌಂಡ್ ಕುಸಿದ ರಭಸಕ್ಕೆ ಕಲ್ಲುಗಳೆಲ್ಲ ಪಕ್ಕದ ಮನೆಯ ಗೋಡೆಯ ಮೇಲೆ ಕುಸಿದು ಬಿದ್ದಿವೆ. ಇದರಿಂದ ಆ ಮನೆಯ ಕಿಟಕಿ ಗಾಜುಗಳು ಹಾಗೂ ಗೋಡೆಗೆ ಹಾನಿಯಾಗಿದೆ.