ಕರ್ನಾಟಕ

karnataka

ETV Bharat / state

ಮಳೆ ಅವಾಂತರ: ಕುಸಿತದ ಭೀತಿಯಲ್ಲಿ ಉಳ್ಳಾಲದ ಐದು ಮನೆಗಳು - ullal Landslide news 2020

ದಕ್ಷಿಣ ಕನ್ನಡದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇನ್ನು ಬೆಳ್ಮಕಾನೆಕೆರೆ ಎಂಬಲ್ಲಿ ಮನೆಗಳು ಹಾನಿಗೊಳಗಾಗಿದ್ದು, ಅಧಿಕಾರಿಗಳು ಗಮನ ಹರಿಸಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

ಸಂಕಷ್ಟದಲ್ಲಿ ಉಳ್ಳಾಲದ ಐದು ಕುಟುಂಬಗಳು
ಸಂಕಷ್ಟದಲ್ಲಿ ಉಳ್ಳಾಲದ ಐದು ಕುಟುಂಬಗಳು

By

Published : Sep 24, 2020, 11:10 AM IST

ಉಳ್ಳಾಲ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಐದು ಮನೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿರರುವ ಘಟನೆ ಬೆಳ್ಮಕಾನೆಕೆರೆ ಎಂಬಲ್ಲಿ ನಡೆದಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು ಈ ಅವಾಂತರಕ್ಕೆ ಕಾರಣ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಕಾನೆಕೆರೆ ನಿವಾಸಿ ಅಬ್ದುಲ್ ರೆಹಮಾನ್, ಅನೀಸ್, ಹಸೈನಾರ್ ಎಂಬುವರ ಮನೆಗಳು ಸೇರಿದಂತೆ ಇತರೆ ಕೆಲ ಮನೆಗಳು ಹಾನಿಗೀಡಾಗಿವೆ. ತಡೆಗೋಡೆ ನಿರ್ಮಾಣವು ಅವೈಜ್ಞಾನಿಕವಾಗಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗುತ್ತಿವೆ. ಇಷ್ಟಲ್ಲಾ ಅವಾಂತರ ಸಂಭವಿಸಿದರೂ ಸಹ ಅಧಿಕಾರಿಗಳು ಮಾತ್ರ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಕಷ್ಟದಲ್ಲಿ ಉಳ್ಳಾಲದ ಐದು ಕುಟುಂಬಗಳು

ಸರ್ಕಾರದಿಂದ ಕಟ್ಟಲಾದ ತಡೆಗೋಡೆ ಕಳಪೆಯಾಗಿದೆ. ಸ್ಥಳಕ್ಕೆ ಗ್ರಾಮಕರಣಿಕರೂ ಬಂದಿಲ್ಲ. ಲಾಕ್​ಡೌನ್ ಬಳಿಕ ಕೆಲಸವಿಲ್ಲದೆ ಕಂಗೆಟ್ಟಿದ್ದೇವೆ. ನಮ್ಮ ಬದುಕು ಬೀದಿಗೆ ಬಂದಿದೆ. ಊಟ ಮಾಡಲು ಗತಿಯಿಲ್ಲದಂತಾಗಿದೆ. ದಿನಗೂಲಿಯಲ್ಲೇ ಜೀವನ ನಡೆಯಬೇಕು. ಆದರೆ ಅದೂ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

ABOUT THE AUTHOR

...view details