ಮಂಗಳೂರು:ಕರಾವಳಿಯಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯದಿಂದ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.
ಮಂಗಳೂರಿನಲ್ಲಿ ಹವಾಮಾನ ವೈಪರೀತ್ಯ.. ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ - ಹವಾಮಾನ ವೈಪರೀತ್ಯ
ಕರಾವಳಿಯಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯದಿಂದ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತ ಮಾಹಿತಿ ಇಂತಿದೆ.
ಮಂಗಳೂರಿನಿಂದ ಹೊರಡುವ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಆರು ವಿಮಾನಗಳ ಸಮಯ ಬದಲಾವಣೆ ಮಾಡಲಾಗಿದೆ. ನಿನ್ನೆ ರಾತ್ರಿ 8.40ಕ್ಕೆ ಅಬುದಾಬಿಗೆ ಹೊರಡಬೇಕಿದ್ದ ವಿಮಾನ ಇಂದು ಬೆಳಗ್ಗೆ 6.15ಕ್ಕೆ, ಇಂದು ಬೆಳಗ್ಗೆ 6.35 ಕ್ಕೆ ಬಹರೈನ್ಗೆ ಹೊರಡಬೇಕಿದ್ದ ವಿಮಾನ ಬೆಳಗ್ಗೆ 9.35 ಕ್ಕೆ, ಇಂದು ಬೆಳಗ್ಗೆ 9.10 ಕ್ಕೆ ದುಬೈಗೆ ಹೊರಡಬೇಕಿದ್ದ ವಿಮಾನ ಮಧ್ಯಾಹ್ನ 3.15 ಕ್ಕೆ, ಸಂಜೆ 5.35 ಕ್ಕೆ ದೋಹಾಗೆ ತೆರಳಬೇಕಿದ್ದ ವಿಮಾನ ಸಂಜೆ 6.35 ಕ್ಕೆ, ರಾತ್ರಿ 8.05 ಕ್ಕೆ ದುಬೈಗೆ ತೆರಳಬೇಕಿದ್ದ ವಿಮಾನ 10.25 ಕ್ಕೆ, ಸಂಜೆ 7.25 ಕ್ಕೆ ದಮಾಮ್‌ಗೆ ಹೊರಡಬೇಕಿದ್ದ ವಿಮಾನ ರಾತ್ರಿ 12.20ಕ್ಕೆ ಹೊರಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.