ಕರ್ನಾಟಕ

karnataka

ETV Bharat / state

ಕರಾವಳಿಯಲ್ಲಿ ಭಾರಿ ಮಳೆ: ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೋರಾಂಗಣ ಜಲಾವೃತ - ಕಿರು ಹೊಳೆ

ನಿನ್ನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುರಿದ ಮಳೆಗೆ ಕಿರು ಹೊಳೆ ತುಂಬಿದ್ದು, ಹೊಳೆ ಪಕ್ಕದ ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ. ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೋರಾಂಗಣ ಸಹ ಜಲಾವೃತಗೊಂಡಿದ್ದು, ಕೆಲ ಹೊತ್ತಿನ ಬಳಿಕ ನೀರು ಇಳಿಮುಖಗೊಂಡಿದೆ.

heavy rain in kukke subrahmanya
ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೋರಾಂಗಣ ಜಲಾವೃತ

By

Published : Oct 14, 2022, 10:23 AM IST

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುರಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ ಆದಿ ಸುಬ್ರಹ್ಮಣ್ಯ ಬಳಿಯ ಕಿರು ಹೊಳೆ ತುಂಬಿದ್ದು, ಹೆಚ್ಚಿನ ಪ್ರಮಾಣದ ನೀರು ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೋರಾಂಗಣದವರೆಗೂ ಬಂದು ನಿಂತಿತ್ತು.

ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇತ್ತು. ಆದರೆ ಸಾಯಂಕಾಲದ ವೇಳೆಗೆ ಸುಳ್ಯ, ಕಡಬ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ರಾತ್ರಿ ಸುರಿದ ಮಳೆಗೆ ಕಿರು ಹೊಳೆ ತುಂಬಿದ್ದು, ಹೊಳೆ ಪಕ್ಕದ ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ. ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೋರಾಂಗಣ ಸಹ ಜಲಾವೃತಗೊಂಡಿದ್ದು, ಕೆಲ ಹೊತ್ತಿನ ಬಳಿಕ ನೀರು ಇಳಿಮುಖಗೊಂಡಿದೆ ಎಂದು ತಿಳಿದುಬಂದಿದೆ.

ಇಳಿಮುಖಗೊಂಡ ನೀರು

ಇದನ್ನೂ ಓದಿ:ಮುಳುಗಿದ ಸೇತುವೆ ಮೇಲೆ ವಿದ್ಯಾರ್ಥಿನಿಯರು, ವಾಹನ ಸವಾರರ ಸಂಚಾರ.. ಅಪಾಯಕ್ಕೆ ಆಹ್ವಾನ

ಹವಾಮಾನ ಇಲಾಖೆ ಕರಾವಳಿಗೆ ಅಕ್ಟೊಬರ್ 15 ಮತ್ತು 17 ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಗುಡುಗು, ಗಾಳಿ ಸಹಿತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ABOUT THE AUTHOR

...view details