ಮಂಗಳೂರು/ಬೆಳ್ತಂಗಡಿ:ಮಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಮೀನುಗಾರಿಕಾ ಬಂದರ್ನಲ್ಲಿದ್ದ ಬೋಟ್ಗಳು ಚೆಲ್ಲಾಪಿಲ್ಲಿಯಾಗಿದೆ.
ಮೀನುಗಾರಿಕೆ ಮುಗಿಸಿ ಬಂದು ಲಂಗರು ಹಾಕಿದ್ದ ಬೋಟ್ಗಳು ಭಾರಿ ಗಾಳಿಗೆ ಬಂದರು ಬಿಟ್ಟು ಕಡಲ ಕಿನಾರೆಯ ವಿವಿಧೆಡೆ ಹೋಗಿವೆ. ರಾತ್ರಿ 9.30 ರ ಸುಮಾರಿಗೆ ಮಂಗಳೂರಿನಲ್ಲಿ ಭಾರಿ ಗಾಳಿ ಸಹಿತ ಮಳೆ ಸುರಿದಿದ್ದು, ಹಲವೆಡೆ ಹಾನಿ ಸಂಭವಿಸಿದೆ.
ಮೀನುಗಾರಿಕಾ ಬಂದರ್ನಲ್ಲಿದ್ದ ಬೋಟ್ಗಳು ಚೆಲ್ಲಾಪಿಲ್ಲಿ ಬೆಳ್ತಂಗಡಿ ತಾಲೂಕಿನ ಹಲವೆಡೆ ಭಾರಿ ಗಾಳಿ ಸಹಿತ ಮಳೆ:ಭಾರಿ ಗಾಳಿ ಸಹಿತ ಮಳೆಗೆ ಹಲವೆಡೆ ತೊಂದರೆ ಉಂಟಾಗಿದೆ. ಮದ್ದಡ್ಕ ಸಮೀಪ ಮರದ ದೊಡ್ಡ ಕೊಂಬೆಯೊಂದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಸ್ವಲ್ಪ ಹೊತ್ತು ತಡೆ ಉಂಟಾಯಿತು. ತಕ್ಷಣ ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ:ಇಂದು ಮೈಮುಲ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಉರುವಾಲು ಗ್ರಾಮ ಹಲೇಜಿಯ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಕೇತಿಕ ಜಾತ್ರೆ ಹಮ್ಮಿಕೊಂಡಿದ್ದು, ಗುಡುಗು ಸಹಿತ ಮಳೆಯಿಂದ ದೇವರ ಉತ್ಸವಕ್ಕೆ ಕೊಂಚ ತಡೆ ಉಂಟಾಯಿತು. ಇದೇ ಸಂದರ್ಭದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಿದ್ದು, ಮಳೆ ಕಾರಣ ನಾಟಕ ಪ್ರದರ್ಶನ ರದ್ದುಗೊಳಿಸಲಾಯಿತು. ಮಳೆ ನಿಂತ ಬಳಿಕ ಶ್ರೀ ದೇವರ ಉತ್ಸವ ಸರಳವಾಗಿ ನೆರವೇರಿತು.