ಬಂಟ್ವಾಳ: ತಾಲೂಕಿನಲ್ಲಿ ಇಂದು ಕೂಡ ಗಾಳಿ ಸಮೇತ ಮಳೆ ಮುಂದುವರೆದಿದ್ದು, ಸುಮಾರು ಏಳು ಕಡೆಗಳಲ್ಲಿ ಹಾನಿ ಸಂಭವಿಸಿದೆ.
ಬಂಟ್ವಾಳದಲ್ಲಿ ಅವಾಂತರ ಸೃಷ್ಟಿಸಿದ ಗಾಳಿ-ಮಳೆ - Heavy rain in bantwala
ತಾಲೂಕಿನಲ್ಲಿ ಗುರುವಾರವೂ ಗಾಳಿ-ಮಳೆ ಮುಂದುವರೆದಿದ್ದು, ಅಪಾರ ಹಾನಿ ಸಂಭವಿಸಿದೆ.
Heavy rain in Bantwala
ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಗೋಡೆ ಮೇಲೆ ಮರ ಬಿದ್ದ ಪರಿಣಾಮ ರಸ್ತೆ ಬಂದ್ ಆಗಿತ್ತು. ಬಳಿಕ ಅದನ್ನು ತೆರವು ಮಾಡಲಾಯಿತು.
ಪುದು ಗ್ರಾಮದ ಹೊನ್ನಮ್ಮ ಎಂಬವರ ಮನೆ, ಇಡ್ಕಿದು ಗ್ರಾಮದ ಸುಶೀಲ ಅವರ ಮನೆ, ಕೆದಿಲ ಗ್ರಾಮದ ಪಾತಿಮಾರ ಅವೆ ಮನೆ, ವಿಟ್ಲ ಪಡ್ನೂರು ಗ್ರಾಮದ ಸೇಸಪ್ಪ ಬೆದ್ರಕಾಡು ಅವರ ಮನೆ, ಪುದು ಗ್ರಾಮದ ಜಮೀಲ ಅವರ ಮನೆ, ಮಹಮ್ಮದ್ ಸಾಹಿದ್ ಎಂಬವರ ಮನೆಗೆ ಹಾನಿಯಾಗಿದೆ.