ಮಂಗಳೂರು :ಎರಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆ ನಗರದಲ್ಲಿ ಇಂದು ಮತ್ತೆ ಮುಂದುವರಿದಿದೆ. ನಿನ್ನೆ ರಾತ್ರಿಯಿಂದಲೂ ಮಳೆ ಸುರಿಯುತ್ತಿದೆ. ಬೆಳಗ್ಗೆ ಎಳೆ ಬಿಸಿಲಿನಂತೆ ಕಂಡು ಬಂದರೂ ಮೋಡ ಮುಸುಕಿದ ವಾತಾವರಣವಿದೆ. ಸಣ್ಣಗೆ ಮಳೆ ಹನಿಯ ಸಿಂಚನ ಆಗುತ್ತಿತ್ತು. ಆದರೆ, ಇದೀಗ ಮಧ್ಯಾಹ್ನದ ಬಳಿಕ ಮಳೆಯ ತೀವ್ರತೆ ಹೆಚ್ಚಾಗಿದ್ದು, ಜನರು ರಸ್ತೆಗಿಳಿಯಲು ಅಡ್ಡಿಪಡಿಸಿದೆ.
ಮಂಗಳೂರಿನಲ್ಲಿ ಮುಂದುವರಿದ ಮಳೆ, ಅಲ್ಲಲ್ಲಿ ಅವಾಂತಾರ ಸೃಷ್ಟಿ - Dakshina kannada rain news
ಮಳೆಯ ನೀರು ಸರಾಗವಾಗಿ ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿಯೇ ಹರಿದು ಹೋಗುತ್ತಿರುವುದು ಕಂಡು ಬಂದಿದೆ. ಅಲ್ಲದೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ..
ಮಂಗಳೂರು ಮಳೆ
ಮಳೆಯ ನೀರು ಸರಾಗವಾಗಿ ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿಯೇ ಹರಿದು ಹೋಗುತ್ತಿರುವುದು ಕಂಡು ಬಂದಿದೆ. ಅಲ್ಲದೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ.