ಕರ್ನಾಟಕ

karnataka

ETV Bharat / state

ಕೊರೊನಾ ಪಾಸಿಟಿವ್: ಸೋಂಕಿತನ ಬಿಟ್ಟು ಅದೇ ಹೆಸರಿನ ಬೇರೆ ವ್ಯಕ್ತಿಯ ಹಿಂದೆ ಅಲೆದಾಡಿದ ಸಿಬ್ಬಂದಿ

ಕೊರೊನಾ ಸೋಂಕಿತನನ್ನು ಹೋಂ ಐಸೋಲೇಷನ್​ನಲ್ಲಿಡಲು ಹೋದ ಸಿಬ್ಬಂದಿ, ಸೋಂಕಿತನ ಬಿಟ್ಟು ಬೇರೆ ವ್ಯಕಿಯ ಹಿಂದೆ ಅಲೆದಾಡಿದ್ದಾರೆ.

coron
coron

By

Published : May 7, 2021, 4:42 AM IST

ಕಡಬ: ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಬಿಟ್ಟು ಅದೇ ಹೆಸರಿನ ಬೇರೆ ವ್ಯಕ್ತಿಯ ಹಿಂದೆ ಸಿಬ್ಬಂದಿ ಅಲೆದಾಡಿದ ಪ್ರಸಂಗ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ನಡೆದಿದೆ.

ವ್ಯಕ್ತಿಯೊಬ್ಬರ ಕೊರೊನಾ ವರದಿಯು ಪಾಸಿಟಿವ್ ಬಂದ ಹಿನ್ನೆಲೆ ಅವರನ್ನು ಹೋಂ ಐಸೋಲೇಷನ್​ನಲ್ಲಿಡಲು ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದರು. ಪಾಸಿಟಿವ್ ಬಂದ ವ್ಯಕ್ತಿ ಫೋನ್​ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದಾಗಿ ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿಯ ಹಿಂದೆ ಸಿಬ್ಬಂದಿ ಅಲೆದಾಡಿದ್ದಾರೆ.

ಕಡಬ ತಾಲೂಕಿನ ರೆಂಜಿಲಾಡಿಯ ವ್ಯಕ್ತಿಯೊಬ್ಬರು ಕೊರೊನಾ ತಪಾಸಣೆ ಮಾಡಿಸಿದ್ದರು. ಈ ವ್ಯಕ್ತಿಯ ವರದಿಯು ಇಂದು ಪಾಸಿಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಆಶಾ ಕಾರ್ಯಕರ್ತೆಯರು ಇವರನ್ನು ಹೋಂ ಐಸೋಲೇಷನ್ ಮಾಡುವ ಸಲುವಾಗಿ ಅವರ ಫೋನ್ ನಂಬರಿಗೆ ಕರೆ ಮಾಡಿದ್ದಾರೆ. ಆದರೆ ಆತನ ಫೋನ್ ನಂಬರ್ ಸಂಪರ್ಕಕ್ಕೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ, ಸ್ಥಳೀಯರಲ್ಲಿ ಆ ವ್ಯಕ್ತಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಸ್ಥಳೀಯರು ತಪ್ಪಾಗಿ ಅರ್ಥೈಸಿಕೊಂಡು ಅದೇ ಹೆಸರಿನ ರೆಂಜಿಲಾಡಿಯಲ್ಲಿ ಉದ್ಯಮ ನಡೆಸುವ ಇನ್ನೊಬ್ಬ ವ್ಯಕ್ತಿಯ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಜವಾದ ಕೊರೊನಾ ಪಾಸಿಟಿವ್ ವ್ಯಕ್ತಿಯನ್ನು ಬಿಟ್ಟು ಅಧಿಕಾರಿಗಳು ಕೊರೊನಾ ತಪಾಸಣೆಯೇ ಮಾಡಿಸದ ಸ್ಥಳೀಯ ಬೇರೆ ವ್ಯಕ್ತಿಯ ಹಿಂದೆ ಅಡ್ಡಾಡಿದ್ದಾರೆ. ಆದ್ರೆ ಈತ ಕೊರೊನಾ ಟೆಸ್ಟ್​ಗೆ ಸ್ಯಾಂಪಲ್​ ಕೊಟ್ಟಿರಲಿಲ್ಲ. ಬಳಿಕ ನಿಜವಾಗಿ ಪಾಸಿಟಿವ್ ಬಂದಿರುವ ವ್ಯಕ್ತಿ ಸಿಕ್ಕ ಬಳಿಕ, ಇನ್ನೊಬ್ಬ ವ್ಯಕ್ತಿ ಸಂಕಷ್ಟದಿಂದ ಪಾರಾಗಿದ್ದಾನೆ.

ಇನ್ನು ಸಿಬ್ಬಂದಿಯ ಮಾಹಿತಿಯಿಂದ ಸ್ಥಳೀಯರು ಪಾಸಿಟಿವ್ ಬರದ ವ್ಯಕ್ತಿಗೆ ಫೋನ್ ಮಾಡಿ, ಕೊರೊನಾ ಪಾಸಿಟಿವ್ ಇದ್ರೂ ಯಾಕೆ ಅಂಗಡಿ ಬಾಗಿಲು ತೆಗೆದಿದಿಯಾ ಎಂದು ಗಲಾಟೆ ಮಾಡಿದ್ದರು. ಆದ್ರೆ ಬಳಿಕ ಸತ್ಯ ಗೊತ್ತಾಗಿ ಎಲ್ಲರೂ ನಿಟ್ಟುಸಿರು ಬಿಟ್ಟರು.

ತಪಾಸಣೆ ಸಮಯದಲ್ಲಿ ವಿಳಾಸ ಸಹಿತ ಎಲ್ಲಾ ಮಾಹಿತಿಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗುತ್ತದೆ. ನಂತರವೂ ಈ ತರಹ ಎಡವಟ್ಟುಗಳು ಮುಂದುವರೆಯುತ್ತಲೇ ಇವೆ.

ABOUT THE AUTHOR

...view details