ಮಂಗಳೂರು :ಆರೋಗ್ಯ ಸಚಿವ ಸುಧಾಕರ್ ಅವರು ದಕ್ಷಿಣ ಕನ್ನಡದ ವೆನ್ಲಾಕ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2 ದಿನಗಳ ಕರಾವಳಿ ಪ್ರವಾಸದಲ್ಲಿರುವ ಸುಧಾಕರ್ ಅವರು ಇಂದು ಮಂಗಳೂರಿನ ವಾಮಂಜೂರು, ಮೂಡಬಿದ್ರೆ , ಬಂಟ್ವಾಳ ಆಸ್ಪತ್ರೆಗಳಿಗೆ ಭೇಟಿ ನೀಡುವ ನಿಗದಿತ ಕಾರ್ಯಕ್ರಮವಿತ್ತು. ಇದೇ ವೇಳೆ ಬಂಟ್ವಾಳ ಆಸ್ಪತ್ರೆಗೆ ಭೇಟಿ ನೀಡಿ ಮಂಗಳೂರಿಗೆ ಬಂದ ಅವರು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದರು.
ವೆನ್ಲಾಕ್ ಆಸ್ಪತ್ರೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ದಿಢೀರ್ ಭೇಟಿ - ವೆನ್ಲಾಕ್ ಆಸ್ಪತ್ರೆ
ಆರಂಭದಲ್ಲಿ ವೆನ್ಲಾಕ್ ಹೊಸ ಕಟ್ಟಡಕ್ಕೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿನ ಬ್ಲಡ್ ಬ್ಯಾಂಕ್ ಸೇರಿ ಇತರ ಆಡಳಿತ ವ್ಯವಸ್ಥೆ ಪರಿಶೀಲಿಸಿದರು. ಬಳಿಕ ವಾರ್ಡ್ಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಯೋಗಕ್ಷೇಮ ಮತ್ತು ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ವಿಚಾರಿಸಿದರು..
ಸುಧಾಕರ್
ಆರಂಭದಲ್ಲಿ ವೆನ್ಲಾಕ್ ಹೊಸ ಕಟ್ಟಡಕ್ಕೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿನ ಬ್ಲಡ್ ಬ್ಯಾಂಕ್ ಸೇರಿ ಇತರ ಆಡಳಿತ ವ್ಯವಸ್ಥೆ ಪರಿಶೀಲಿಸಿದರು. ಬಳಿಕ ವಾರ್ಡ್ಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಯೋಗಕ್ಷೇಮ ಮತ್ತು ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ಬಳಿಕ ಹಳೆ ಕಟ್ಟಡದಲ್ಲಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಶಾಸಕ ರಾಜೇಶ್ ನಾಯ್ಕ್, ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಮೊದಲಾದವರು ಉಪಸ್ಥಿತರಿದ್ದರು.