ಕರ್ನಾಟಕ

karnataka

ETV Bharat / state

ಹೃದಯಾಘಾತದಿಂದ ಉರ್ವ ಠಾಣೆ ಹೆಡ್‌ಕಾನ್‌ಸ್ಟೇಬಲ್ ನಿಧನ - oorva police station head constable death news

ಮಂಗಳೂರು ನಗರದ ಉರ್ವ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸಿದ್ಧಾರ್ಥ್ ಜೆ ಎಂಬುವರು ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ..

head constable dies by heart attack
ಹೆಡ್‌ಕಾನ್‌ಸ್ಟೇಬಲ್ ನಿಧನ

By

Published : Oct 2, 2021, 10:33 PM IST

ಮಂಗಳೂರು: ನಗರದ ಉರ್ವ ಪೊಲೀಸ್ ಠಾಣೆ ಹೆಡ್‌ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ಧಾರ್ಥ್ ಜೆ ಎಂಬುವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪುತ್ತೂರು ತಾಲೂಕಿನ ಈಶ್ವರಮಂಗಲದವರಾಗಿರುವ ಇವರು, ಮಂಗಳೂರಿನ ಪೊಲೀಸ್ ಕ್ವಾಟ್ರಸ್​​ನಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ಸಿದ್ಧಾರ್ಥ್ ಅವರಿಗೆ ಅನಾರೋಗ್ಯ ಕಾಣಿಸಿತ್ತು. ಬಳಿಕ ಮನೆಗೆ ತೆರಳಿದ ಅವರಿಗೆ ನಸುಕಿನ ಜಾವ ಮೂರು ಗಂಟೆಗೆ ಹೃದಯಾಘಾತವಾಗಿದೆ.

ಸಿದ್ದಾರ್ಥ್ ಅವರನ್ನು ಕೂಡಲೇ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಸಿದ್ದಾರ್ಥ್ ಅವರು ಈ ಮೊದಲು ಪಾಂಡೇಶ್ವರ, ಸಂಚಾರ ಠಾಣೆ ಸಹಿತ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ : ವಿಡಿಯೋ ನೋಡಿ

ABOUT THE AUTHOR

...view details