ಮಂಗಳೂರು:ಯಡಿಯೂರಪ್ಪನನ್ನು ಸಿಎಂ ಮಾಡಬೇಕು, ತಾನು ವಿಪಕ್ಷ ನಾಯಕನಾಗಬೇಕೆಂದು ಸಿದ್ದರಾಮಯ್ಯ ಪ್ರಯತ್ನ ಪಟ್ಟರು ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್ಡಿಡಿ ವಾಗ್ದಾಳಿ - hd devegowda in manglore latest news
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಮಂಗಳೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನಗೆ ಯಡಿಯೂರಪ್ಪ ಬಗ್ಗೆ ಮೃದು ಧೋರಣೆ ಇಲ್ಲ, ತಾನು ವಿಪಕ್ಷ ನಾಯಕನಾಗಲು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರ 14 ತಿಂಗಳ ಅವಧಿಯಲ್ಲಿ ನಿತ್ಯ ಸಮಸ್ಯೆ ಸೃಷ್ಟಿಸಿದರು ಎಂದರು.
ಬಿಜೆಪಿ ಬಲ ತಗ್ಗಿಸಲು ಸಿದ್ದರಾಮಯ್ಯ ಅವರ ಜೊತೆ ಮೂರು ಬಾರಿ ಕೂತು ಚರ್ಚಿಸಿದೆ. ಆದರೆ ಅದು ಫಲಿಸಲಿಲ್ಲ. ಕಳೆದ ಚುನಾವಣೆಯ ಅವಧಿಯಲ್ಲಿ ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಅಂದರು. ದೇವೇಗೌಡರು ಬಿಜೆಪಿ ಬಿ ಟೀಂ ಅಂದರು, ದೇವೇಗೌಡ ಕ್ಲೀನ್ ಆಗಿ ಬರಬೇಕು ಅಂದರು. ಇದೆಲ್ಲದರ ಪರಿಣಾಮ ಅವರು ಹಿಂದೆ 130 ಸೀಟಿನ ಬದಲಿಗೆ 70 ಪಡೆದರು, ನಾವು 31 ಇದ್ದದ್ದು 37 ಕ್ಕೆ ಏರಿಸಿಕೊಂಡೆವು ಎಂದರು. ಯಡಿಯೂರಪ್ಪ ಅವರ ಪಕ್ಷದ ಒಳಗೆ ಸಮಸ್ಯೆ ಇದೆ. ಆ ಸಮಸ್ಯೆ ನನಗ್ಯಾಕೆ, ಅದರ ಅವಶ್ಯಕತೆಯಿಲ್ಲ ಎಂದರು.ಅನರ್ಹ ಶಾಸಕರ ಸ್ಥಾನಕ್ಕೆ ಚುನಾವಣೆ ನಡೆದರೆ ಅದರಲ್ಲಿ ಮನಸಿಗೆ ತೃಪ್ತಿಯಾಗುವಷ್ಟು ಸ್ಥಾನ ಗೆಲ್ಲಲ್ಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.