ಮಂಗಳೂರು:ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡದೆ ಇರುವ ಬಗ್ಗೆ ವಿಪಕ್ಷಗಳ ಟೀಕೆಗೆ ಕಾರ್ಯಕರ್ತರು ಆತಂಕ ಪಡಬೇಕಿಲ್ಲ. ಕೇಂದ್ರ ಗರಿಷ್ಠ ಹಣ ಬಿಡುಗಡೆ ಮಾಡುತ್ತೆ ಅಂತ ವಿಶ್ವಾಸ ಇದ್ದರೆ ಸಾಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೇಂದ್ರ ಗರಿಷ್ಠ ಹಣ ಬಿಡುಗಡೆ ಮಾಡುತ್ತೆ ಅಂತ ವಿಶ್ವಾಸ ಇದ್ದರೆ ಸಾಕು: ಕೋಟ ಶ್ರೀನಿವಾಸ ಪೂಜಾರಿ - ಸಚಿವ
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನಡೆದ ಕಾರ್ಯಗಾರ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗರಿಷ್ಠ ಹಣ ಬಿಡುಗಡೆ ಮಾಡುತ್ತೆ ಅಂತ ವಿಶ್ವಾಸ ಇದ್ದರೆ ಸಾಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನಡೆದ ಕಾರ್ಯಗಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಕೇಂದ್ರ ಹಣ ನೀಡಿಲ್ಲ ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದರೆ ಆತಂಕ ಪಡಬೇಕಿಲ್ಲ, ಯಾವುದೇ ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳು ಟೀಕೆ ಮಾಡದೆ ಬೇರೆ ದಾರಿ ಇಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಹೊಗಳುತ್ತಾರೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ ಎಂದರು.
ಕೇಂದ್ರ ಸರಕಾರ ನಿಶ್ಚಯವಾಗಿ ಗರಿಷ್ಠ ಹಣ ಬಿಡುಗಡೆ ಮಾಡುತ್ತದೆ ಎಂಬ ವಿಶ್ವಾಸವಿದೆ. ಅಲ್ಲಿಯವರೆಗೆ ರಾಜ್ಯ ಸರ್ಕಾರ ನೀಡಿದ ಪರಿಹಾರದ ಹಣ ಸಂತ್ರಸ್ತರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.