ಮಂಗಳೂರು :ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮದ ನಿಮಿತ್ತ ಉಪ್ಪಿನಂಗಡಿ-ನೆಲ್ಯಾಡಿ ಮಾರ್ಗದಲ್ಲಿ ಪ್ರಯಾಣಿಸುತ್ತಿರುವಾಗ ದಾರಿ ಮಧ್ಯೆ ದ್ವಿಚಕ್ರ ವಾಹನ ಸ್ಕಿಡ್ ಆಗಿ ಯುವಕ ಮತ್ತು ಯುವತಿ ಗಾಯಗೊಂಡಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಶಾಸಕರೇ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದರು.
ಶಾಸಕರ ಮಾನವೀಯತೆ: ಬೈಕ್‌ನಿಂದ ಬಿದ್ದ ಗಾಯಾಳುಗಳಿಗೆ ನೆರವಾದ ಹರೀಶ್ ಪೂಂಜ - Kannada news
ಯುವಕ ಮತ್ತು ಯುವತಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸ್ಕಿಡ್ ಆಗಿದ್ದು, ಯುವಕ ಯುವತಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಗಾಯಾಳುಗಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಥಮ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಪ್ರಥಮ ಚಿಕಿತ್ಸೆ ನೀಡಿದ ಶಾಸಕ ಹರೀಶ್ ಪೂಂಜಾ
ಯುವಕ ಮತ್ತು ಯುವತಿ ಸಂಚಾರ ಮಾಡುತ್ತಿರುವ ದ್ವಿಚಕ್ರ ವಾಹನ ಸ್ಕಿಡ್ ಆಗಿದ್ದು,ರಸ್ತೆಗೆ ಬಿದ್ದಿರುವ ಗಾಯಾಳುಗಳಿಗೆ ತಾವೇ ನಿಂತು ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟು ಶಾಸಕ ಹರೀಶ್ ಪೂಂಜ ಪ್ರಯಾಣ ಮುಂದುವರೆಸಿದರು.
ಶಾಸಕರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.