ಕರ್ನಾಟಕ

karnataka

ETV Bharat / state

ಕಾವಿಯನ್ನು ದುಷ್ಕೃತ್ಯಗಳಿಗೆ ಗುರಾಣಿಯಾಗಿ ಬಳಸಬಾರದು: ಯುಪಿ ಸಿಎಂ ವಿರುದ್ಧ ಹರೀಶ್ ಕುಮಾರ್​ ಕಿಡಿ

ಯೋಗಿ ಆದಿತ್ಯನಾಥ್ ಅವರು ರಾಜಕೀಯಕ್ಕೆ ಬರುವ ಮೊದಲು ಸ್ವಾಮೀಜಿ ಆಗಿದ್ದಾಗಲೇ ಅವರ ಮೇಲೆ 52 ಕ್ರಿಮಿನಲ್ ಮೊಕದ್ದಮೆಗಳಿದ್ದವು. ಆ ಬಳಿಕವೂ ಅವರ ಮೇಲೆ ಕೇಸ್​​ಗಳು ದಾಖಲಾಗಿವೆ. ಸಿಎಂ ಆದ ಬಳಿಕ ಬಿ ರಿಪೋರ್ಟ್ ಮಾಡಿ ಎಲ್ಲಾ ಕೇಸುಗಳನ್ನೂ ತೆಗೆದು ಹಾಕಲಾಗಿದೆ ಎಂದು ಯುಪಿಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ವಿರುದ್ಧ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಯುಪಿ ಸಿಎಂ ವಿರುದ್ಧ ಹರೀಶ್ ಕುಮಾರ್ ಆಕ್ರೋಶ
ಯುಪಿ ಸಿಎಂ ವಿರುದ್ಧ ಹರೀಶ್ ಕುಮಾರ್ ಆಕ್ರೋಶ

By

Published : Oct 15, 2020, 12:58 PM IST

ಮಂಗಳೂರು: ಕಾವಿಧಾರಿಯಾಗಿರುವ ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಅದು ತಪ್ಪೆಂದು ಹೇಳುತ್ತಿಲ್ಲ. ಆದರೆ ಕಾವಿಯನ್ನು ತಾವು ಮಾಡುವ ದುಷ್ಕೃತ್ಯಗಳಿಗೆ ಗುರಾಣಿಯಾಗಿ ಬಳಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಬಿಜೆಪಿಗರಿಗೆ ತಿರುಗೇಟು ನೀಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯಕ್ಕೆ ಬಂದ ಬಳಿಕ ಯಾರೇ ಜನಪ್ರತಿನಿಧಿಗಳನ್ನು ಟೀಕೆ ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಆದರೆ ಇದನ್ನು ಬಿಟ್ಟು ಬಿಜೆಪಿಯವರು ದ್ವೇಷ ಹಾಗೂ ನೀಚ ರಾಜಕಾರಣಕ್ಕೆ ಕೈ ಹಾಕುತ್ತಿದ್ದಾರೆ ಎಂದು ದೂರಿದರು.

ಯೋಗಿ ಆದಿತ್ಯನಾಥ್ ಅವರು ರಾಜಕೀಯಕ್ಕೆ ಬರುವ ಮೊದಲು ಸ್ವಾಮೀಜಿ ಆಗಿದ್ದಾಗಲೇ ಅವರ ಮೇಲೆ 52 ಕ್ರಿಮಿನಲ್ ಮೊಕದ್ದಮೆಗಳಿತ್ತು. ಆ ಬಳಿಕವೂ ಅವರ ಮೇಲೆ ಕೇಸ್​​​ಗಳು ದಾಖಲಾಗಿವೆ. ಸಿಎಂ ಆದ ಬಳಿಕ ಬಿ ರಿಪೋರ್ಟ್ ಮಾಡಿ ಎಲ್ಲಾ ಕೇಸುಗಳನ್ನೂ ತೆಗೆದು ಹಾಕಲಾಗಿದೆ. ಆದರೆ ಇದೀಗ ರಾಜಕೀಯಕ್ಕೆ ಬಂದ ಬಳಿಕ ಎಲ್ಲಾ ಟೀಕೆ, ವಿರೋಧಗಳನ್ನು ಎದುರಿಸಲು ತಯಾರಿಬೇಕು. ಆದರೆ ಅದು ಬಿಟ್ಟು ರಾಜಕೀಯವಾಗಿ ಟೀಕೆ ಮಾಡಿದಾಗ ಅವರ ಜಾತಿ, ಧರ್ಮವನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ‌ಬಿಜೆಪಿಯವರಿಗೆ ಇದು ಶೋಭೆ ತರುವ ಕೆಲಸವಲ್ಲ ಎಂದರು.

ಸಾಕ್ಷಿ ಮಹಾಜನ್ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸಾಧ್ವಿ ಪ್ರಜ್ಞಾ ಸಿಂಗ್ ಮೇಲೆ ಬಾಂಬ್ ದಾಳಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಯಾವ ಬಿಜೆಪಿಗರೂ ಮಾತನಾಡಿಲ್ಲ. ಆದರೆ ಸ್ವಾಮಿ ಅಗ್ನಿವೇಶ್ ಅವರು ದಲಿತಪರ ಹೋರಾಟ ಮಾಡುವಾಗ ಅವರ ಮೇಲೆ ಬಜರಂಗದಳದವರು ದಾಳಿ ಮಾಡಿ ಹಲ್ಲೆ ಮಾಡುತ್ತಾರೆ. ಹಾಗಾದರೆ ಇವರಿಗೆ ಕಾವಿ ಮೇಲೆ ಇರುವ ಭಕ್ತಿ ಯಾವ ರೀತಿಯದ್ದು? ಉತ್ತರಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗುತ್ತದೆ. ಈ ಬಗ್ಗೆ ಯಾವ ಬಿಜೆಪಿಗರು ಒಂದು ಮಾತೆತ್ತುವುದಿಲ್ಲ. ಬಿಜೆಪಿಯವರಿಗೆ ಆಡಳಿತ ಪಕ್ಷದಲ್ಲಿರುವಾಗ ಒಂದು ಕಾನೂನು, ವಿರೋಧ ಪಕ್ಷದಲ್ಲಿರುವಾಗ ಒಂದು ಕಾನೂನು ಎಂಬ ರೀತಿಯಲ್ಲಿ ವ್ಯವಹರಿಸುತ್ತಿದ್ದಾರೆ. ಧರ್ಮಾಧಾರಿತ ರಾಜಕಾರಣ, ಕೋಮುಗಳ ನಡುವೆ ದ್ವೇಷ ಹುಟ್ಟಿಸುವುದು, ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವಂತಹ ಕಾರ್ಯ ಮಾಡುತ್ತಿದ್ದಾರೆ‌. ಆದ್ದರಿಂದ ಟೀಕೆ, ವಿರೋಧಗಳನ್ನು ಸಹಿಸಲು ಸಾಧ್ಯವಿಲ್ಲದಿದ್ದಲ್ಲಿ ರಾಜಕೀಯ ಬಿಟ್ಟು ಹೋಗಲಿ ಎಂದು‌ ಹೇಳಿದರು.

ABOUT THE AUTHOR

...view details