ಮಂಗಳೂರು:ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇಬ್ಬರಿಗೂ ಒಬ್ಬರೇ ತಾಯಿ ಎಂದು ಮಾಜಿ ಸಚಿವ ರಮಾನಾಥ ರೈಯವರ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಇದು ದ.ಕ.ಜಿಲ್ಲೆಗೆ ಬಹುದೊಡ್ಡ ಅವಮಾನ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದರು.
ರಮಾನಾಥ ರೈಗೆ ರಾಜಕೀಯ ಅವಸಾನದ ಕಾಲ ಹತ್ತಿರವಾಗಿದೆ: ಹರಿಕೃಷ್ಣ ಬಂಟ್ವಾಳ
2018 ರಲ್ಲಿ ವಿಧಾನಸಭಾ ಚುನಾವಣೆ ಸಂದರ್ಭ ಮಂಗಳೂರಿನ ಪುರಭವನದಲ್ಲಿ ಮುಸ್ಲಿಂ ಸಮ್ಮೇಳನದಲ್ಲಿ ಭಾಗವಹಿಸಿದ ರಮಾನಾಥ ರೈಯವರು, ನಾನು ಕಳೆದ 30 ವರ್ಷಗಳ ಲ್ಲಿ ಶಾಸಕನಾಗಿದ್ದು ಅಲ್ಲಾಹುವಿನ ಕೃಪೆಯಿಂದ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮೊಳಗೆ ಹರಿಯುವ ರಕ್ತ ಯಾವುದೆಂದು ದ.ಕ.ಜಿಲ್ಲೆಗೆ ಪರಿಚಯಿಸಿಕೊಂಡಿದ್ದಾರೆ. ಆದ್ದರಿಂದ ಅವರ ರಕ್ತ ಪಾಕಿಸ್ತಾನದ್ದೋ, ಭಾರತದ್ದೋ ಎಂದು ಪ್ರಶ್ನಿಸಿದರು.
ನಗರದ ಕೊಡಿಯಾಲ್ ಬೈಲ್ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಈ ಹೇಳಿಕೆಯಿಂದ ರಮಾನಾಥ ರೈಯವರ ರಾಜಕೀಯ ಅವಸಾನದ ಕಾಲ ಹತ್ತಿರವಾಗಿದೆ ಎಂದು ತಿಳಿದು ಬರುತ್ತದೆ. ಖಂಡಿತಾ ನಾವು ಈ ಹೇಳಿಕೆಯನ್ನು ಖಂಡಿಸುತ್ತೇವೆ. 2018 ರಲ್ಲಿ ವಿಧಾನಸಭಾ ಚುನಾವಣೆ ಸಂದರ್ಭ ಮಂಗಳೂರಿನ ಪುರಭವನದಲ್ಲಿ ಮುಸ್ಲಿಂ ಸಮ್ಮೇಳನದಲ್ಲಿ ಭಾಗವಹಿಸಿದ ರಮಾನಾಥ ರೈಯವರು, ನಾನು ಕಳೆದ 30 ವರ್ಷಗಳಲ್ಲಿ ಶಾಸಕನಾಗಿದ್ದು ಅಲ್ಲಾಹುವಿನ ಕೃಪೆಯಿಂದ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮೊಳಗೆ ಹರಿಯುವ ರಕ್ತ ಯಾವುದೆಂದು ದ.ಕ.ಜಿಲ್ಲೆಗೆ ಪರಿಚಯಿಸಿಕೊಂಡಿದ್ದಾರೆ. ಆದ್ದರಿಂದ ಅವರ ರಕ್ತ ಪಾಕಿಸ್ತಾನದ್ದೋ, ಭಾರತದ್ದೋ ಎಂದು ಪ್ರಶ್ನಿಸಿದರು.
ಅಲ್ಲದೆ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರ ತಾಯಿಗೂ ಇದೇ ರೀತಿ ಬೈದಿದ್ದಾರೆ. ಬಂಟ್ವಾಳದ ಜನತೆ ಅವರನ್ನು ಓಡಿಸಿದರು. ಅಲ್ಲದೆ ಜಿಲ್ಲೆಯಿಂದಲೇ ಕಾಂಗ್ರೆಸ್ ಪಕ್ಷವನ್ನೂ ಓಡಿಸಿದರು. ಈಗ ನರೇಂದ್ರ ಮೋದಿಯವರ ಮೇಲೆ ಈ ರೀತಿಯ ಹೇಳಿಕೆ ನೀಡಿ ದೊಡ್ಡ ಕಲ್ಲು ಹೊತ್ತು ಹಾಕಿದ್ದೀರಿ. ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ತಲೆ ಎತ್ತದ ರೀತಿಯಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕೆಂದಿದ್ದರೆ ರಮಾನಾಥ ರೈಯವರನ್ನು ಕೂಡಲೇ ಉಚ್ಛಾಟಿಸಿ ಎಂದು ಹೇಳಿದರು.