ಕರ್ನಾಟಕ

karnataka

ETV Bharat / state

ಡಿವೈಎಫ್​ಐ ಬೆಂಬಲಿತ ಅಭ್ಯರ್ಥಿಯ ಮೇಲೆ ಕಾಂಗ್ರೆಸ್​ ಬೆಂಬಲಿತ ವ್ಯಕ್ತಿಯಿಂದ ಹಲ್ಲೆ - Congress-supporter badruddin

ಡಿವೈಎಫ್​ಐ ಬೆಂಬಲಿತ ಅಭ್ಯರ್ಥಿ ಇಕ್ಬಾಲ್​ಗೆ ಮೇಲೆ ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಬದ್ರುದ್ದೀನ್ ಎಂಬುವವರಿಂದ ಹಲ್ಲೆ ನಡೆದಿದೆ. ಈ ಸಂಬಂಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಫ್​ಐ ಬೆಂಬಲಿತ ಅಭ್ಯರ್ಥಿಯ ಮೇಲೆ ಕಾಂಗ್ರೆಸ್​ ಬೆಂಬಲಿತ ವ್ಯಕ್ತಿಯಿಂದ ಹಲ್ಲೆ
ಡಿವೈಎಫ್​ಐ ಬೆಂಬಲಿತ ಅಭ್ಯರ್ಥಿಯ ಮೇಲೆ ಕಾಂಗ್ರೆಸ್​ ಬೆಂಬಲಿತ ವ್ಯಕ್ತಿಯಿಂದ ಹಲ್ಲೆ

By

Published : Dec 24, 2020, 3:18 PM IST

ಉಳ್ಳಾಲ (ದಕ್ಷಿಣ ಕನ್ನಡ):ಎಸ್​ಡಿಪಿಐ ಮತ್ತು ಕಾಂಗ್ರೆಸ್ ನಡುವೆ ಕಳೆದ ಎರಡು ದಿನಗಳ ಹಿಂದೆ ಮಾರಾಮಾರಿ ನಡೆದಿತ್ತು. ಇದಾದ ಬಳಿಕ ಮತ್ತೆ ಡಿವೈಎಫ್​ಐ ಬೆಂಬಲಿತ ಅಭ್ಯರ್ಥಿಗೆ ಕಾಂಗ್ರೆಸ್​​ ಪಕ್ಷದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಹಲ್ಲೆ ನಡೆಸಿರುವ ಘಟನೆ ಹರೇಕಳದಲ್ಲಿ ನಡೆದಿದೆ.

ಡಿವೈಎಫ್​ಐ ಬೆಂಬಲಿತ ಅಭ್ಯರ್ಥಿಯ ಮೇಲೆ ಕಾಂಗ್ರೆಸ್​ ಬೆಂಬಲಿತ ವ್ಯಕ್ತಿಯಿಂದ ಹಲ್ಲೆ

ಡಿವೈಎಫ್​ಐ ಬೆಂಬಲಿತ ಅಭ್ಯರ್ಥಿ ಇಕ್ಬಾಲ್​ಗೆ ಮೇಲೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಬದ್ರುದ್ದೀನ್ ಎಂಬುವವರಿಂದ ಹಲ್ಲೆ ನಡೆದಿದೆ. ಬದ್ರುದ್ದೀನ್​ಗೆ ಸೇರಿದ ಮರದ ಅಂಗಡಿಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಕ್ಬಾಲ್ ಮರ ಹಿಡಿದು ಹಲ್ಲೆಗೆ ಮುಂದಾದಗ ತಡೆದ ಬದ್ರುದ್ದೀನ್, ಖುದ್ದು ಮರದ ಸೋಂಟೆಯಿಂದ ಇಕ್ಬಾಲ್ ತಲೆಗೆ ಹೊಡೆದಿದ್ದಾನೆ.

ಓದಿ:ಕೈ​ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

ಎಸ್​ಡಿಪಿಐ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಬಗ್ಗೆ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಇದೀಗ ಕಾಂಗ್ರೆಸ್ - ಡಿವೈಎಫ್​ಐ ನಡುವೆ ಗಲಾಟೆ ನಡೆದು ಈ ಕುರಿತ ಪ್ರಕರಣಗಳು ಕೊಣಾಜೆ ಠಾಣೆಯ ಮೆಟ್ಟಿಲೇರಿದೆ.

ABOUT THE AUTHOR

...view details