ಪುತ್ತೂರು (ದಕ್ಷಿಣಕನ್ನಡ):ಪುತ್ತೂರಿನ ಇತಿಹಾಸ ಪ್ರಸಿದ್ಧ ಕೋಟಿ-ಚೆನ್ನಯ ಜೋಡು ಕರೆ ಕಂಬಳದಲ್ಲಿ ಚಿತ್ರನಟಿ, ಬಿಗ್ಬಾಸ್ ತಾರೆ ಸಾನ್ಯಾ ಅಯ್ಯರ್ಗೆ ಕಿರುಕುಳ ನೀಡಿದ್ದಾರೆ ಎನ್ನಲಾಗುತ್ತಿದ್ದು ಈ ಬಗ್ಗೆ ಕಂಬಳದ ವ್ಯವಸ್ಥಾಪಕರಲ್ಲಿ ಓರ್ವರಾದ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದ ನವದಂಪತಿ ಕೆಎಲ್ ರಾಹುಲ್ - ಅಥಿಯಾ ಶೆಟ್ಟಿ
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಪ್ರಕರಣವು ಕಂಬಳ ಸಮಿತಿಯ ಪ್ರಮುಖರು ಸಭೆಯನ್ನು ಮುಗಿಸಿ ಮನೆಗೆ ಹೋದ ಬಳಿಕ ನಡೆದ ಘಟನೆಯಾಗಿದೆ. ಇದು ಕಂಬಳಕ್ಕೆ ಸಂಬಂಧಿಸಿದ ವಿಷಯವಲ್ಲ. ಅದನ್ನು ಉದ್ದೇಶಪೂರ್ವಕವಾಗಿ ಎಳೆದು ತರಲಾಗಿದೆ. ಈ ಪ್ರಕರಣಕ್ಕೂ ಕಂಬಳ ಸಮಿತಿಗೂ ಸಂಬಂಧವಿಲ್ಲ ಎಂದಿದ್ದಾರೆ.
ನಾನು ರಾತ್ರಿ 11 ಗಂಟೆಯ ತನಕ ಕಂಬಳದಲ್ಲಿದ್ದೆ. ಈ ನಡುವೆ ಸಾನ್ಯಾ ಅಯ್ಯರ್ ಅವರನ್ನು ಕಾರ್ಯಕ್ರಮ ಮುಗಿದ ಬಳಿಕ ಅವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿ ಅವರನ್ನು ವಿಶ್ರಾಂತಿ ಕೊಠಡಿಯಲ್ಲಿ ಬಿಡಲಾಗಿತ್ತು. ಆ ಬಳಿಕ ಅವರು ಮತ್ತೆ ಕಾರ್ಯಕ್ರಮದತ್ತ ಬಂದದಕ್ಕೆ ನಾವು ಹೊಣೆಗಾರರಲ್ಲ. ಅಲ್ಲದೆ, ಮಾರನೆಯ ದಿನ ಕುತ್ತಾರ್‍ನಲ್ಲಿ ನಡೆದ ಕೊರಗಜ್ಜನ ಕಾರ್ಯಕ್ರಮದಲ್ಲಿ ಮೂವರು ಯುವಕರು ಹಾಗೂ ಮೂವರು ಯುವತಿಯರು ನನಗೆ ಸಿಕ್ಕಿ ನನ್ನೊಂದಿಗೆ ಮಾತುಕತೆ ಮಾಡಿದ್ದರು. ಆಗ ಅವರು ನಾವು ಸಾನ್ಯಾ ಜೊತೆಗೆ ಬಂದವರು. ಕಂಬಳವನ್ನು ವೀಕ್ಷಣೆ ಮಾಡಿದ್ದೇವೆ. ತುಂಬಾ ಖುಷಿಯಾಯಿತು ಎಂದು ಹೇಳಿದ್ದರು. ಘಟನೆಯ ಬಗ್ಗೆ ಅವರು ಯಾರೂ ನನ್ನಲ್ಲಿ ಈ ಪ್ರಸ್ತಾಪವೇ ಮಾಡಿಲ್ಲ.