ಕರ್ನಾಟಕ

karnataka

ETV Bharat / state

ಆತ್ಮಹತ್ಯೆಯ ವಿರುದ್ಧ 'ಪ್ರಪುಲ್ಲಿತ ಭಾವಚಿತ್ರ' ಸ್ಪರ್ಧೆಯ ವಿಶೇಷ ಅಭಿಯಾನ..! - Photo Competition

ಮಂಗಳೂರಿನಲ್ಲಿ 'ಪ್ರಪುಲ್ಲಿತ ಭಾವಚಿತ್ರ ಸ್ಪರ್ಧೆ' ಎಂಬ ವಿಶೇಷ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು ಈ ಭಾವಚಿತ್ರಗಳ ಆಯ್ಕೆಯ ಮಾನದಂಡದಲ್ಲಿ ಮನಸ್ಸಿನ ಭಾವಗಳಿಗೆ ಒತ್ತು ನೀಡುವ ಮೂಲಕ ಇಬ್ಬರು ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

Happy Face Photo Competition
ಆಡ್ರಿಯಲ್ ಸವಿಯೋ ಮಿರಾಂಡ

By

Published : Jun 10, 2020, 11:46 PM IST

ಮಂಗಳೂರು:ಮಖವು ಮನಸ್ಸಿನ ಕನ್ನಡಿ ಅಂತಾರೆ. ಮನಸ್ಸಿಲ್ಲಿರುವ ಸುಖ - ದುಃಖ ಆತನ ಮುಖದ ಮೇಲೆ ವ್ಯಕ್ತವಾಗುತ್ತದೆ. ಇದೇ ಪರಿಕಲ್ಪನೆ ಇಟ್ಟುಕೊಂಡು ಮಂಗಳೂರಿನ ಲಾವ್ದಾತೋ ಸೀ ಸಮಿತಿಯಿಂದ 'ಪ್ರಪುಲ್ಲಿತ ಭಾವಚಿತ್ರ ಸ್ಪರ್ಧೆ' (Happy Face Photo Competition) ಎಂಬ ವಿಶೇಷ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಐಶ್ವರ್ಯಾ ಎಸ್‌.

ಈ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಆಡ್ರಿಯಲ್ ಸವಿಯೋ ಮಿರಾಂಡ ಹಾಗೂ ಮಹಿಳಾ ವಿಭಾದಲ್ಲಿ ಐಶ್ವರ್ಯಾ ಎಸ್‌. ತಲಾ 10 ಸಾವಿರ ರೂ. ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

'ಪ್ರಪುಲ್ಲಿತ ಭಾವಚಿತ್ರ ಸ್ಪರ್ಧೆ' ಅಂದರೇನು?

ಮಂಗಳೂರು ಧರ್ಮ ಪ್ರಾಂತ್ಯವು 2020-21ನೇ ವರ್ಷವನ್ನು 'ಜೀವಿತದ ವರುಷ' ಎಂದು ಘೋಷಣೆ ಮಾಡಿತ್ತು. ಈ ಮೂಲಕ ಆತ್ಮಹತ್ಯೆ ತಡೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿತ್ತು. ಅದೇ ರೀತಿ ಮಂಗಳೂರಿನ ಲಾವ್ದಾತೋ ಸೀ ಸಮಿತಿಯು ಆತ್ಮಹತ್ಯೆ ತಡೆ ಅಭಿಯಾನದ ಅಂಗವಾಗಿ 'ಪ್ರಪುಲ್ಲಿತ ಭಾವಚಿತ್ರ ಸ್ಪರ್ಧೆ' ಎಂಬ ವಿಶೇಷ ಸ್ಪರ್ಧೆಯನ್ನು ಆಯೋಜಿಸಿತ್ತು.

ಆಡ್ರಿಯಲ್ ಸವಿಯೋ ಮಿರಾಂಡ

ಮನುಷ್ಯನ ಮುಖಭಾವದಿಂದ ಆತನ ಮಾನಸಿಕ ವೇದನೆಯನ್ನು ಅರಿಯಬಹುದೆಂಬ ಮನೋವೈಜ್ಞಾನಿಕ ವಿಧಾನದ ಮೂಲಕ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ 12 ವರ್ಷದ ಬಾಲಕರಿಂದ 80 ವರ್ಷದ ವೃದ್ಧರವರೆಗೂ ಸುಮಾರು 650-700 ಭಾವಚಿತ್ರಗಳು ಬಂದಿದ್ದವಂತೆ. ಈ ಭಾವಚಿತ್ರಗಳ ಆಯ್ಕೆಯ ಮಾನದಂಡದಲ್ಲಿ ಅಂದ ಪರಿಗಣನೆಯಾಗದೆ, ಮನಸ್ಸಿನ ಭಾವಗಳಿಗೆ ಒತ್ತು ನೀಡಲಾಗಿತ್ತು. ಸ್ಪರ್ಧಾಳುಗಳ ಭಾವಚಿತ್ರಗಳನ್ನು ಮನೋವೈದ್ಯರು, ಆಪ್ತಸಲಹೆಗಾರರು ಕೂಲಂಕಷವಾಗಿ ಪರೀಕ್ಷಿಸಿ ಇಬ್ಬರನ್ನು ಆಯ್ಕೆ ಮಾಡಿದ್ದಾರಂತೆ.

ಈ ಬಗ್ಗೆ ಆತ್ಮಹತ್ಯೆ ತಡೆ ಅಭಿಯಾನದ ಸಂಯೋಜಕ, ಮಂಗಳೂರು ಧರ್ಮಪ್ರಾಂತ್ಯದ ಫಾ.ರಿಚರ್ಡ್‌ ಡಿಸೋಜ ಮಾತನಾಡಿ, ಈ ಸ್ಪರ್ಧೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟವರು ಸೆಲ್ಫಿ ಅಥವಾ ಮೊಬೈಲ್ ಮೂಲಕ ಕೇವಲ ಮುಖದ ಫೋಟೋ ತೆಗೆದು ಕಳುಹಿಸಲು ಸೂಚಿಸಲಾಗಿತ್ತು. ಮುಖದ ಭಾವವನ್ನು ಮನೋವೈದ್ಯರು ಪರೀಕ್ಷಿಸಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಮೂಲಕ ನನ್ನ ಜೀವ, ನನ್ನ ಆತ್ಮ ಉಳಿಸೋದು ಕರ್ತವ್ಯ. ಇತರರ ಜೀವ, ಆತ್ಮ ಉಳಿಸೋದು ಪುಣ್ಯದ ಕೆಲಸ. ಅಲ್ಲದೆ ಆತ್ಮಹತ್ಯೆಗೆ ಮನಸ್ಸು ಮಾಡಿದವರನ್ನು ಆಪ್ತ ಸಲಹೆಗಾರರ ಬಳಿ ಕರೆದೊಯ್ದು ಅವರ ಮನಸ್ಸು ಬದಲಾಯಿಸುವ ಕಾರ್ಯ ಕೈಗೊಳ್ಳಬೇಕು ಎಂಬ ವಿಶೇಷ ಅಭಿಯಾನದ ಮೂಲಕ ಈ ಸ್ಪರ್ಧೆ ಆಯೋಜಿಸಿದ್ದೆವು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು ಎಂದು ಹೇಳಿದರು.

ಮಂಗಳೂರು ಧರ್ಮಪ್ರಾಂತ್ಯದ ಫಾ.ರಿಚರ್ಡ್‌ ಡಿಸೋಜ

ABOUT THE AUTHOR

...view details