ಕರ್ನಾಟಕ

karnataka

ETV Bharat / state

ಇಂದಿನಿಂದ ಹಜ್​​ ಯಾತ್ರೆ ಆರಂಭ: ಕರ್ನಾಟಕದಿಂದ ಈ ಬಾರಿ 8739 ಯಾತ್ರಿಗಳು ಪ್ರಯಾಣ - Kannada news,Etv Bharat,Hajj, pilgrimage, begins ,from ,today,ಇಂದಿನಿಂದ, ಹಜ್ ಯಾತ್ರೆ ,ಆರಂಭ ,ಕರ್ನಾಟಕದಿಂದ, ಈ ಬಾರಿ, 8739 ಹಜ್ ಯಾತ್ರಿಗಳು, ಪ್ರಯಾಣ,ಮುಸ್ಲಿಮರು,ಮೆಕ್ಕಾ, ಮದೀನ,

ಕಳೆದ ಹನ್ನೊಂದು ವರ್ಷಗಳಿಂದ ಮಂಗಳೂರಿನಿಂದ ಹಜ್ ಯಾತ್ರೆ ಆರಂಭವಾಗಿದ್ದು, ಈ ಬಾರಿಯ ಹಜ್​​ಗೆ ಹೋಗುವ ಯಾತ್ರೆ ಇಂದು ಆರಂಭವಾಗಿದೆ. ಕರ್ನಾಟಕದಿಂದ‌ ಈ ಬಾರಿ 8739 ಮಂದಿ ಹಜ್​​ಗೆ ಪ್ರಯಾಣಿಸುತ್ತಿದ್ದು, ಕಳೆದ ಬಾರಿ 6300 ಮಂದಿ ಯಾತ್ರೆ ಮಾಡಿದ್ದರು.

ಇಂದಿನಿಂದ ಹಜ್ ಯಾತ್ರೆ ಆರಂಭ

By

Published : Jul 17, 2019, 5:50 PM IST

ಮಂಗಳೂರು: ಮುಸ್ಲಿಂರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಮಾಡಬೇಕೆಂದು ಬಯಸುತ್ತಾರೆ. ಈ ಬಾರಿಯ ಹಜ್ ಯಾತ್ರೆ ಈಗಾಗಲೇ ಆರಂಭವಾಗಿದ್ದು, ಮಂಗಳೂರಿನಿಂದ ಇಂದಿನಿಂದ ಹಜ್​​ಗೆ ಯಾತ್ರಿಗಳು ಪ್ರಯಾಣ ಬೆಳೆಸುತ್ತಿದ್ದಾರೆ.

ಕಳೆದ ಹನ್ನೊಂದು ವರ್ಷದಿಂದ ಮಂಗಳೂರಿನಿಂದ ಹಜ್ ಯಾತ್ರೆ ಆರಂಭವಾಗಿದ್ದು, ಈ ಬಾರಿಯ ಹಜ್​​ಗೆ ಹೋಗುವ ಯಾತ್ರೆ ಇಂದು ಆರಂಭವಾಗಿದೆ. ಕರ್ನಾಟಕದಿಂದ‌ ಈ ಬಾರಿ 8739 ಮಂದಿ ಹಜ್​​ಗೆ ಪ್ರಯಾಣಿಸುತ್ತಿದ್ದು, ಕಳೆದ ಬಾರಿ 6300 ಮಂದಿ ಯಾತ್ರೆ ಮಾಡಿದ್ದರು. ಇದರಲ್ಲಿ ಮಂಗಳೂರು ಕೇಂದ್ರದಿಂದ 747 ಮಂದಿ ಹಜ್ ಯಾತ್ರಿಗಳು ಯಾತ್ರೆ ಮಾಡುತ್ತಿದ್ದಾರೆ. ಪವಿತ್ರ ಮೆಕ್ಕಾ, ಮದೀನಾದಲ್ಲಿ 40 ದಿನಗಳ ಯಾತ್ರೆಗೆ ಇವರು ಸಿದ್ಧಗೊಂಡಿದ್ದು, ಇಂದಿನಿಂದ ಶುಕ್ರವಾರದವರೆಗೆ 5 ವಿಮಾನಗಳಲ್ಲಿ ಈ ಎಲ್ಲ ಹಜ್ ಪ್ರಯಾಣಿಕರು ಮದೀನಾ ತಲುಪಲಿದ್ದಾರೆ.

ಇಂದಿನಿಂದ ಹಜ್ ಯಾತ್ರೆ ಆರಂಭ

ಬುಧವಾರ ಸಂಜೆ 6.40ರ ವಿಮಾನದಲ್ಲಿ 150, ಗುರುವಾರ ಬೆಳಿಗ್ಗೆ 11.30ಕ್ಕೆ 150, 12.30ಕ್ಕೆ‌149, ರಾತ್ರಿ 12.30ಕ್ಕೆ 139 ಮತ್ತು ಸಂಜೆ 5.30ಕ್ಕೆ 159 ಯಾತ್ರಿಗಳು ಮದೀನಾಗ ಪ್ರಯಾಣ ಬೆಳೆಸಲಿದ್ದಾರೆ. 40 ದಿನದ ಹಜ್ ಯಾತ್ರೆಯ ವಿಮಾನ ಮೊದಲಿಗೆ ಮದೀನಾ ತಲುಪಲಿದ್ದು, ಅಲ್ಲಿ 10 ದಿನದ ಯಾತ್ರೆ ಮುಗಿದ ಬಳಿಕ ಒಂದು ತಿಂಗಳು ಯಾತ್ರಿಗಳು ಮೆಕ್ಕಾದಲ್ಲಿ ಇರಲಿದ್ದಾರೆ. ಯಾತ್ರೆ ಮುಗಿದು ಸೆ. 1, 2, 3ಕ್ಕೆ ಹಜ್ ಯಾತ್ರಿಗಳು ಮರಳಿ‌ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

For All Latest Updates

ABOUT THE AUTHOR

...view details