ಕರ್ನಾಟಕ

karnataka

ETV Bharat / state

ಹರೇಕಳ ಹಾಜಬ್ಬಗೆ ಪದ್ಮಶ್ರೀ ಪುರಸ್ಕಾರ: ಹಾಜಬ್ಬ ಶಾಲೆ, ಮನೆಯಲ್ಲಿ ಸಂಭ್ರಮ

ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಹಾಗೂ ಶಾಲಾ ಸಿಬ್ಬಂದಿ-ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

hajabba school and family happy about padmashree award for  harekala hajabba
ನ್ಯೂಪಡ್ಪು ಸರ್ಕಾರಿ ಪ್ರಾಥಮಿಕ ಶಾಲೆ

By

Published : Nov 8, 2021, 10:01 PM IST

ಉಳ್ಳಾಲ(ದಕ್ಷಿಣ ಕನ್ನಡ): ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿದ್ದು ಅವರ ಮನೆ ಹಾಗೂ ಶಾಲೆಯಲ್ಲಿ ಸಂತಸ ಇಮ್ಮಡಿಕೊಂಡಿದೆ.


ಹಾಜಬ್ಬ ಅವರು ಕಟ್ಟಿ ಬೆಳೆಸಿದ ನ್ಯೂಪಡ್ಪು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಶಾಲೆ ಯಜಮಾನನಿಗೆ ಪ್ರಶಸ್ತಿ ಪ್ರದಾನ ನಡೆಯುವ ವೇಳೆ ಬ್ಯಾಂಡ್ ಹಾಗೂ ಚಪ್ಪಾಳೆ ಮೂಲಕ ಹಾಜಬ್ಬರನ್ನು ಹಾಡಿ ಹೊಗಳಿ ಗೌರವ ಸಮರ್ಪಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಹರೇಕಳ ಹಾಜಬ್ಬನವರು ಪದ್ಮಶ್ರೀ ಪುರಸ್ಕಾರ ಪಡೆಯುವ ವಿಡಿಯೋವನ್ನು ಪ್ರಾಜೆಕ್ಟರ್ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು.

ಹಾಜಬ್ಬ ಮನೆಯಲ್ಲಿ ಪತ್ನಿ ಮೈಮುನಾ ಹಾಗೂ ಪುತ್ರ ಇಸ್ಮಾಯಿಲ್ ಹಾಗೂ ಸಂಬಂಧಿ ನಿಸಾರ್ ಹಾಗೂ ಇಬ್ಬರು ಪುತ್ರಿಯರು, ಸಂಬಂಧಿಕರು ಮೊಬೈಲ್ ಮೂಲಕ ಮನೆ ಯಜಮಾನ ದೇಶದ ಅತ್ಯುನ್ನತ ಪ್ರಶಸ್ತಿಯ‌ನ್ನು ಪಡೆಯುವುದನ್ನು ಮೊಬೈಲ್ ಮೂಲಕ ನೋಡಿ ಆನಂದಿಸಿದರು.

ಇನ್ನು ಬೆಳಗ್ಗಿನಿಂದಲೇ ಶಾಲೆಯಲ್ಲಿ ಸಂಭ್ರಮ ಮನೆಮಾಡಿತ್ತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕ ವರ್ಗವೂ ಪ್ರಾಜೆಕ್ಟರ್ ಮುಖೇನ ನೋಡುವ ಮೂಲಕ ಕಣ್ತುಂಬಿಕೊಂಡೆವು. ಇದು ಇಡೀ ಶಾಲೆಗೆ ಮತ್ತು ಶಿಕ್ಷಕರಿಗೂ ಸಂದ ಗೌರವ ಎಂದು ಭಾಸವಾಗುತ್ತಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಪೊದುವಾಳ್ ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:'ನಾನು ಅಕ್ಷರ ಕಲಿಯದ ವ್ಯಕ್ತಿ': ಬಿಳಿ ಪಂಚೆ, ಶರ್ಟ್‌ ಧರಿಸಿ ಬರಿಗಾಲಲ್ಲೇ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ 'ಅಕ್ಷರಸಂತ'

ABOUT THE AUTHOR

...view details