ಮಂಗಳೂರು: ನಗರದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಯು ಕಲುಷಿತಗೊಂಡಿದ್ದು, ಕಪ್ಪು ಬಣ್ಣಕ್ಕೆ ತಿರುಗಿದೆ. ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು, ಕಾರಮೊಗರು, ಏತಮೊಗರು ಮುಂತಾದ ಕಡೆಗಳಲ್ಲಿ ಈ ಬದಲಾವಣೆಯಾಗಿದ್ದು, ಪರಿಣಾಮ ಇದರಿಂದ ಸ್ಥಳೀಯರು ಆತಂಕಿತರಾಗಿದ್ದಾರೆ.
ಕಪ್ಪು ಬಣ್ಣಕ್ಕೆ ತಿರುಗಿದ ಫಲ್ಗುಣಿ ನದಿ: ಆತಂಕಿತರಾದ ಸ್ಥಳೀಯರು
ಉಳಾಯಿಬೆಟ್ಟು, ಕಾರಮೊಗರು, ಏತಮೊಗರು ಮುಂತಾದ ಕಡೆಗಳಲ್ಲಿ ಹರಿಯುವ ಫಲ್ಗುಣಿ ನದಿ ನೀರು ಕಲುಷಿತಗೊಂಡಿದ್ದು, ಕಪ್ಪು ಬಣ್ಣಕ್ಕೆ ತಿರುಗಿದೆ.
ಫಲ್ಗುಣಿ ನದಿ
ಫಲ್ಗುಣಿ ನದಿ ತಟದಲ್ಲಿರುವ ಗೋಳಿದಡಿಗುತ್ತಿನ ಮುಹಾಕಾಲೇಶ್ವರ ದೇವರ ಉಜೈನಿ ತೀರ್ಥಬಾವಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕಲುಷಿತ ರಾಸಾಯನಿಕಯುಕ್ತ ನೀರು ಬಂದು ಫಲ್ಗುಣಿ ನದಿಯನ್ನು ಸೇರುವುದೇ ಈ ಬದಲಾವಣೆಗೆ ಕಾರಣ ಎಂದು ಸ್ಥಳೀಯರು ಶಂಕಿಸುತ್ತಿದ್ದಾರೆ.
ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು ಮಾತ್ರವಲ್ಲ, ಹಳದಿ ಬಣ್ಣದ ನೊರೆ ಕಂಡು ಬರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಲಚರಗಳಿಗೂ ಕಂಟಕ ಉಂಟಾಗಬಹುದೆಂದು ಸ್ಥಳೀಯರು ಭೀತಿಗೊಳಗಾಗಿದ್ದಾರೆ.