ಕರ್ನಾಟಕ

karnataka

ETV Bharat / state

19 ವರ್ಷಗಳಿಂದ ಗುರುಪೌರ್ಣಿಮೆ: ಸಂಸ್ಕಾರದ ಪಾಠ ಹೇಳುತ್ತಿದೆ ಕಾರವಾರದ ಅಮೃತ ವಿದ್ಯಾಲಯ - undefined

ಉಜ್ವಲ್ ಲಕ್ಷ್ಮಿಹಾಲ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮೃತ ವಿದ್ಯಾಲಯದ 1ರಿಂದ 10ನೇ ತರಗತಿಯ ಸುಮಾರು 800 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಉಜ್ವಲ್ ಲಕ್ಷ್ಮಿಹಾಲ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮೃತ ವಿದ್ಯಾಲಯದ 1 ರಿಂದ 10ನೇ ತರಗತಿಯ ಸುಮಾರು 800 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

By

Published : Jul 16, 2019, 9:06 PM IST

Updated : Jul 16, 2019, 9:41 PM IST

ಕಾರವಾರ:ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳ‌ ಮೋಡಿಗೆ ಒಳಗಾಗಿರುವ ಮಕ್ಕಳು ಪಾಲಕರನ್ನು ಕಡೆಗಣಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ಕಲಿಸಲು ಶಾಲೆಯೊಂದು ವಿಭಿನ್ನ ಪ್ರಯತ್ನ ನಡೆಸಿದ್ದು, ಗುರು ಪೂರ್ಣಿಮೆ ದಿನ ತಂದೆ-ತಾಯಿಗಳ ಪಾದಪೂಜೆ ಮಾಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಉಜ್ವಲ್ ಲಕ್ಷ್ಮಿಹಾಲ್​ನಲ್ಲಿ ಗುರು ಪೂರ್ಣಿಮೆ ಸಂಭ್ರಮ

ಹೌದು, ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಪೋಷಕರ ಮೇಲಿನ ಗೌರವ, ಭಕ್ತಿ ಕಡಿಮೆಯಾಗುತ್ತಿದೆ ಎನ್ನುವ ಅಪವಾದಕ್ಕೆ ವಿರುದ್ಧವಾಗಿ ಕಳೆದ 19 ವರ್ಷಗಳಿಂದ ವಿಭಿನ್ನ ಪ್ರಯತ್ನ ನಡೆಸುತ್ತಿರುವ ಕಾರವಾರದ ಅಮೃತ ವಿದ್ಯಾಲಯವು, ಈ ವರ್ಷವೂ ಅದನ್ನು ಮುಂದುವರಿಸಿದೆ. ಗುರು ಪೂರ್ಣಿಮೆ ದಿನವಾದ ಇಂದು ಶಾಲೆಯ ಎಲ್ಲ ಮಕ್ಕಳನ್ನು ಒಟ್ಟಿಗೆ ಸೇರಿಸಿ ಮಕ್ಕಳಿಗೆ ಗುರು ಹಿರಿಯರನ್ನು ಹೇಗೆ ಗೌರವದಿಂದ ಕಾಣಬೇಕೆಂಬುದನ್ನು ಮನದಟ್ಟು ಮಾಡಿದೆ.

ನಗರದ ಉಜ್ವಲ್ ಲಕ್ಷ್ಮಿಹಾಲ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮೃತ ವಿದ್ಯಾಲಯದ 1ರಿಂದ 10ನೇ ತರಗತಿಯ ಸುಮಾರು 800 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ತಂದೆ-ತಾಯಿಗಳ ಪಾದ ತೊಳೆದ ಮಕ್ಕಳು ಪೂಜೆ ಮಾಡಿ, ಆರತಿ ಬೆಳಗಿ ಪೂಜೆ ನೆರವೇರಿಸಿದರು. ಇದು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸಲು ಸಾಧ್ಯವಾಗುವುದಲ್ಲದೇ ಅವರನ್ನು ಒಳ್ಳೆಯ ಪ್ರಜೆಗಳನ್ನಾಗಿ ಮಾಡಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ವಿದ್ಯಾಲಯದ ಮುಖ್ಯ ಶಿಕ್ಷಕಿ ವಿನಯಲಕ್ಷ್ಮಿ ವಿ. ನಾಯ್ಕ.

ಪ್ರಸ್ತುತ ದಿನಗಳಲ್ಲಿ ನಮ್ಮ ಸಂಸ್ಕೃತಿ, ಆಚಾರ ವಿಚಾರ ಮರೆಯಾಗುತ್ತಿದೆ. ಇದು ನಮ್ಮ ಮಕ್ಕಳ ಮೇಲೂ ಗಾಢ ಪರಿಣಾಮ ಬೀರುತ್ತದೆ. ಅಮೃತ ವಿದ್ಯಾಲಯದ ವಿಭಿನ್ನ ಪ್ರಯತ್ನದಿಂದಾಗಿ ಮಕ್ಕಳು ಕೇವಲ ಪಾಠವನ್ನು ಮಾತ್ರ ಕಲಿಯದೆ, ಉತ್ತಮ ಸಂಸ್ಕಾರವನ್ನು ಕಲಿಯುತ್ತಿದ್ದಾರೆ. ಮೊಬೈಲ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ಕೂಡ ಮಕ್ಕಳನ್ನು ಸಂಸ್ಕಾರದಿಂದ ದೂರ ಉಳಿಯುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಉತ್ತಮ ಕಾರ್ಯ ನೆರವೇರಿಸಿದೆ ಎನ್ನುತ್ತಾರೆ ಪಾಲಕರಾದ ನೂತನಾ ಸೋನಿ.

Last Updated : Jul 16, 2019, 9:41 PM IST

For All Latest Updates

TAGGED:

ABOUT THE AUTHOR

...view details