ಕರ್ನಾಟಕ

karnataka

ETV Bharat / state

ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಗಳಿಗೆ ಗುರುವಂದನಾ ಕಾರ್ಯಕ್ರಮ - ಅದಮಾರು ಮಠದ ಸುದ್ದಿ

ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡುತ್ತಿರುವ ಅದಮಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಗಳಿಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Gurudandana program
ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಗಳಿಗೆ ಗುರುವಂದನಾ ಕಾರ್ಯಕ್ರಮ

By

Published : Jan 3, 2020, 7:42 PM IST

ಮಂಗಳೂರು:ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡುತ್ತಿರುವ ಅದಮಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಗಳಿಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಗುರುವಂದನಾ ಕಾರ್ಯಕ್ರಮ ಇಂದು ನಗರದಕದ್ರಿ ಕಂಬಳ ರಸ್ತೆಯ ಮಂಜು ಪ್ರಸಾದದಲ್ಲಿ ನಡೆಯಿತು. ಈ ಸಂದರ್ಭ ಅದಮಾರು ಮಠದ ಪೀಠದ ಶ್ರೀ ಕಾಳೀಯ ಮರ್ದನ ದೇವರಿಗೆ ನಾಣ್ಯಗಳಿಂದ ತುಲಾಭಾರ ನೆರವೇರಿಸಲಾಯಿತು.

ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಗಳಿಗೆ ಗುರುವಂದನಾ ಕಾರ್ಯಕ್ರಮ

ಈ ಸಂದರ್ಭ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡುತ್ತಿರುವ ಬಗ್ಗೆ ಮಾತನಾಡಿದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪ್ರರ್ಯಾಯ ಅಂದರೆ ಓರ್ವ ಯತಿ ಮತ್ತೊಬ್ಬ ಯತಿಗೆ ಪೂಜಾ ದೀಕ್ಷೆಯನ್ನು ನೀಡಿ ಮುಂದಿನ ಎರಡು ವರ್ಷಗಳ ಕೃಷ್ಣನ ಪೂಜೆಗೆ ನಿಯೋಜಿಸುವುದು. ಈ ಎರಡು ವರ್ಷಗಳ ಕಾಲ ಪರ್ಯಾಯ ಪೀಠದ ಯತಿಗಳಿಗೆ ಉಡುಪಿಯಲ್ಲಿಯೇ ಇರಬೇಕು, ಕೃಷ್ಣನ ಪೂಜೆ ಅವರೇ ಮಾಡಬೇಕೆಂಬ ಕೆಲವೊಂದು ಸಂಪ್ರದಾಯ, ನಿಬಂಧನೆಗಳಿವೆ ಎಂದು ಹೇಳಿದರು.

ಹಿಂದೆ ಶ್ರೀಕೃಷ್ಣ ಮಠದಲ್ಲಿ ಯಾವ ರೀತಿಯಲ್ಲಿ ಪೂಜೆ ನೆರವೇರಿಸಲಾಗುತ್ತಿತ್ತೋ ಅದನ್ನು ಯಥಾ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಲಾಗುತ್ತದೆ. ಹೊಸ ಯೋಜನೆಗಳ ಕಲ್ಪನೆಗಳೇನು ಈಗ ಇಲ್ಲ. ಸಾಂದರ್ಭಿಕವಾಗಿ ಏನಾದರೂ ಯೋಜನೆಗಳು ಇದ್ದಲ್ಲಿ ಅದಕ್ಕೆ ಸ್ಪಂದಿಸಲಾಗುತ್ತದೆ. ಜನರ ಸಂಪರ್ಕ ನಿರಂತರವಾಗಿ ಲಭ್ಯವಾಗಬೇಕು, ಭಕ್ತರನ್ನು ನೋಡಲು ಅವಕಾಶ ದೊರೆಯಬೇಕೆನ್ನುವ ಉದ್ದೇಶದಿಂದ ಹೊರೆ ಕಾಣಿಕೆಯನ್ನು ಒಂದೇ ದಿವಸ ಮಾಡುವ ಬದಲು ಎರಡು ವರ್ಷಗಳಿಗೆ ವಿಸ್ತಾರ ಮಾಡಲಾಗುವುದು ಎಂದು ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ABOUT THE AUTHOR

...view details