ಕರ್ನಾಟಕ

karnataka

ETV Bharat / state

ತನ್ವೀರ್ ಸೇಠ್ ಪ್ರಕರಣ: ಯು.ಟಿ. ಖಾದರ್​ಗೂ ಗನ್ ಮ್ಯಾನ್ ಭದ್ರತೆ - Gunman Protection For U.T Khadar

ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣದ ಬಳಿಕ ಮಾಜಿ ಶಾಸಕ ಯು.ಟಿ ಖಾದರ್ ಅವರಿಗೂ ಜೀವ ಭಯವಿದೆ ಎಂಬ ಆಘಾತಕಾರಿ ಸುದ್ದಿ ಬಯಲಾಗಿದೆ.

ಯು.ಟಿ.ಖಾದರ್

By

Published : Nov 24, 2019, 11:12 PM IST

ಮಂಗಳೂರು : ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣದ ಬಳಿಕ ಮಾಜಿ ಶಾಸಕ ಯು.ಟಿ ಖಾದರ್ ಅವರಿಗೂ ಜೀವ ಭಯವಿದೆ ಎಂಬ ಆಘಾತಕಾರಿ ಸುದ್ದಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಯು.ಟಿ ಖಾದರ್ ಮಂಗಳೂರಿನಲ್ಲಿರುವ ತನಕ ಅವರಿಗೆ ಗನ್ ಮ್ಯಾನ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣದ ತನಿಖೆ ನಡೆಸುವ ಸಂದರ್ಭದಲ್ಲಿ ಈ ಆಘಾತಕಾರಿ ಸುದ್ದಿ ತಿಳಿದು ಬಂದಿದೆ. ಮತೀಯ ಸಂಘಟನೆಯೊಂದು ಅವರ ಹತ್ಯೆ ನಡೆಸುವ ವ್ಯವಸ್ಥಿತ ಸಂಚು ರೂಪಿಸುತ್ತಿದೆ ಎಂಬ ವಿಷಯ ಬಯಲಾಗಿದೆ. ಕೆಲವೊಂದು ಜಾತ್ಯಾತೀತ ಮುಸ್ಲಿಂ ನಾಯಕರನ್ನು ಗುರಿಯಾಗಿಸಿ ಮತೀಯ ಸಂಘಟನೆಯೊಂದು ಕಾರ್ಯಾಚರಣೆ ನಡೆಸುತ್ತಿದೆ ಎಂಬ ವಿಚಾರ ಬಹಿರಂಗವಾದ ಕೂಡಲೇ ಪೊಲೀಸರು ಚುರುಕಾಗಿದ್ದು ಪ್ರಮುಖ ಮುಖಂಡರಿಗೆ ಭದ್ರತೆ ನೀಡಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಅವರಿಗೂ ಭದ್ರತೆ ಒದಗಿಸಲಾಗಿದೆ. ಪ್ರಸ್ತುತ ಅವರು ಹುಣಸೂರಿನಲ್ಲಿ ಉಪ ಚುನಾವಣಾ ಪ್ರಚಾರದಲ್ಲಿದ್ದು, ಅವರಿಗೆ ಅಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಅರುಣಾಂಗ್ಶು ಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details